ತುಮಕೂರು (ಮೇ.2): ನವಿಲುಗಳ ಸರಣಿ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ಭೋಪಾಲ್‌ ಲ್ಯಾಬ್‌ ಸ್ಪಷ್ಟಪಡಿಸಿದ್ದು, ರಾಷ್ಟ್ರೀಯ ಉಚ್ಚ ಸುರಕ್ಷಾ ಪಶುರೋಗ ಸಂಸ್ಥೆ ನೀಡಿದ ಅಧಿಕೃತ ವರದಿ ಪ್ರಕಾರ ನವಿಲುಗಳ ಅಂಗಾಂಶ ಮಾದರಿಯಲ್ಲಿ ಎಚ್5ಎನ್‌1 ವೈರಸ್ ಇರುವುದು ದೃಢಪಟ್ಟಿದೆ

ಈ ಹಿಂದೆ ತುಮಕೂರು ತಾಲೂಕಿನ ಸುತ್ತಮುತ್ತ 44 ನವಿಲುಗಳ ಅಸಹಜವಾಗಿ ಏಕಾಏಕಿ ಸಾವನ್ನಪ್ಪಿಪ್ಪಿದ್ದವು. ಈ ವೇಳೆ ಮೃತ ನವಿಲುಗಳಿಂದ ಅರಣ್ಯ ಇಲಾಖೆ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಲ್ಯಾಬಿಗೆ ಕಳುಹಿಸಿತ್ತು. ಈಗ ಅದರ ವರದಿ ಬಂದಿದ್ದು, ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ದೃಢಪಟ್ಟಿದೆ.

ಪಶು ಸಂಗೋಪನಾ ಇಲಾಖೆ ಜಾಗ್ರತೆ:

ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ತುರ್ತುಕ್ರಮಕ್ಕೆ ಪಶು ಸಂಗೋಪನಾ ಇಲಾಖೆ ಮುಂದಾಗಿದೆ. ಈ ಭಾಗದ ಕೋಳಿ ಸಾಕಾಣಿಕೆ ಕೇಂದ್ರಗಳ ಮೇಲೆ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಜನರು ಆತಂಕ ಪಡದೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.