

ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ (Mangaluru Cooker Blast) ಅಪರಾಧಿ ಉಗ್ರ ಶಾರಿಖ್‌ಗೆ ವಿಧಿಸಲಾದ 10 ವರ್ಷ ಕಠಿಣ ಶಿಕ್ಷೆಯ ಪ್ರಮಾಣವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಎನ್‌ಐಎ (NIA) ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

10 ವರ್ಷ ಶಿಕ್ಷೆ ತುಂಬಾ ಕಡಿಮೆ ಆಯ್ತು ಎಂದು ಎನ್‌ಐಎ ನಿರ್ಧರಿಸಿದೆ. ಶಾರಿಕ್‌ಗೆ ಈಗ 27 ವರ್ಷ, ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಇನ್ನೂ 7 ವರ್ಷ ಮಾತ್ರ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.


7 ವರ್ಷದಲ್ಲಿ ಆತನಿಗೆ 34 ವರ್ಷ ಆಗಲಿದೆ. ಮಧ್ಯಮ ವಯಸ್ಕನಾಗಿ ಹೊರಗೆ ಬಂದ್ರೆ ಮತ್ತೆ ಭಯೋತ್ಪಾದಕ ಕೃತ್ಯದಲ್ಲಿ ಆತ ಭಾಗಿ ಆಗುವ ಸಾಧ್ಯತೆ ಇದೆ. ಮನ ಪರಿವರ್ತನೆ ಸಾಧ್ಯತೆ ತೀರಾ ಕಡಿಮೆ ಎಂದು ಎನ್‌ಐಎ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಕನಿಷ್ಟ 20 ರಿಂದ 30 ವರ್ಷ ಜೈಲಿನಲ್ಲಿ ಆತನನ್ನು ಇರಿಸಲು ಎನ್‌ಐಎ ತೀರ್ಮಾನಿಸಿದೆ.
