


ಉಡುಪಿ : ಪಿಂಕ್ ಸೂಪರ್ ಮೂನ್ ಏಪ್ರಿಲ್ 1 ಬುಧವಾರ ಸಂಜೆ 6 :30ಕ್ಕೆ ಕಾಣಿಸಿಕೊಳ್ಳಲಿದ್ದು, ಇದು ಸಾಮಾನ್ಯಕ್ಕಿಂತ ಹೆಚ್ಚು 30% ಪ್ರಕಾಶಮಾನವಾಗಿ ಮತ್ತು ದೊಡ್ಡದಾಗಿ ಕಾಣುತ್ತದೆ. ಇದು ವಸಂತಕಾಲದ ಹೂವುಗಳ ಅರಳುವಿಕೆಯನ್ನು ಸೂಚಿಸುವ ಹೆಸರಾಗಿದೆ.
ಈ ಅಪೂರ್ವ ಚಂದ್ರನನ್ನು ವೀಕ್ಷಿಸಲು ರಾತ್ರಿ ಆಕಾಶದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳಲಿರುವುದರಿಂದ ಮೋಸ್ಟ ಪವರ್ಫುಲ್ ದೂರದರ್ಶಕವೆನಿಸಿದ ವಿಶ್ವ ದಾಖಲೆ ಮಣ್ಣನೆ ಪಡೆದ ಮಣಿಪಾಲದ ಆರ್. ಮನೋಹರ್ ಅವರ ನೇರ ನೋಡುವ ಆವಿಷ್ಕಾರಿಸಿದ ದೂರದರ್ಶಕದ ಮೂಲಕ.. ಏಪ್ರಿಲ್ ರಂದು 1. ರಂದು ಸಂಜೆ ಕೊಳಲಗಿರಿಯ ಅತಿ ಎತ್ತರ ಪ್ರದೇಶವಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ನ ಮುಂಭಾಗ (ಗೋ ಆಸ್ಪತ್ರೆಯ ಬಳಿ ) ಕಾರ್ಯಕ್ರಮ ಆಯೋಜಿಸಲಾಗಿದೆ.


ಈ ಕಾರ್ಯಕ್ರಮವನ್ನು ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಫ್ರಾಂಕಿ ಡಿಸೋಜ ಕೊಳಲಗಿರಿ. ಉದ್ಘಾಟಿಸಲಿದ್ದು, ಉದ್ಯಮಿ ಪ್ರಕಾಶ್ ಭಂಡಾರಿ. ಉಪಸ್ಥಿತರಿರಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರಾದ ಗಣೇಶ್ ರಾಜ್ ಸರಳಬೆಟ್ಟು, ಜಯ ಶೆಟ್ಟಿ ಬನ್ನoಜೆ ತಿಳಿಸಿದ್ದಾರೆ.
ಸ್ಥಳೀಯರಲ್ಲಿ ಖಗೋಳ ಆಸಕ್ತಿ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು, ದೂರದರ್ಶಕ ದಲ್ಲಿ ವೀಕ್ಷಣೆ ಮಾಡಲು ಉಚಿತ ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
