ಚಿಕ್ಕಮೂಡ್ನೂರು ಗ್ರಾಮದ ಬೀರ್ನಹಿತ್ಲುನಲ್ಲಿ ತೀರಾ ಬಡತನದಲ್ಲಿ ಇರುವ ಕೊರಗಪ್ಪ ಇವರ ಮನೆಯು 6 ವರುಷಗಳ ಹಿಂದೆ ಕಾಮಗಾರಿ ಅರ್ದಕ್ಕೆ ನಿಂತಿದ್ದು ಈ ಮನೆಯ ನಿರ್ಮಾಣ ಕಾರ್ಯವನ್ನು ಸ್ಥಳೀಯ
ಶ್ರೀ ವಿಷ್ಣು ಯುವಕ ಮಂಡಲದ ಕೆಮ್ಮಾಯಿ ಇವರು ವಹಿಸಿಕೊಂಡಿದ್ದು ಈ ಮನೆಗೆ
ಪ್ರಶಾಂತ್ ಇಲೆಕ್ಟ್ರಿಕಲ್ ಬೊಳುವಾರು ಇದರ ಮಾಲಿಕ ಪುತ್ತೂರು ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಆದ ಅಶೋಕ್ ಪ್ರಶಾಂತ್ ಕೆಮ್ಮಾಯಿ ಇವರು ಈ ಮನೆಗೆ ಉಚಿತ ವಿದ್ಯುತ್ ವೈರಿಂಗ್ ಸೌಲಭ್ಯವನ್ನು ಕಲ್ಪಸಿಕೊಂಡಿದ್ದು 20-3-2026ರಂದು ಚಾಲನೆ ನೀಡಿದರು.


ವಿದ್ಯುತ್ ಗುತ್ತಿಗೆದಾರರ ಪ್ರಶಾಂತ್ ಕೆಮ್ಮಾಯಿ ಹಾಗೂ ಶ್ರೀ ವಿಷ್ಣು ಯುವಕ ಮಂಡಲದ ಸದಸ್ಯರಿಗೆ ಕೊರಗಪ್ಪ ಇವರು ಕೃತಜ್ಞತೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಬನ್ನೂರು ಪಂಚಾಯತಿನ ನಿಕಟ ಪೂರ್ವ ಸದಸ್ಯ ತಿಮ್ಮಪ್ಪ ಪೂಜಾರಿ, ಶ್ರೀ ವಿಷ್ಣು ಯುವಕ ಮಂಡಲದ ಅಧ್ಯಕ್ಷ ದಯಾನಂದ ಗೌಡ , ಭಾಜಪದ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ನಾಗೇಶ್. ಟಿ. ಎಸ್ ಕೆಮ್ಮಾಯಿ ಉಪಸ್ಥಿತರಿದ್ದರು.