ಬಂಟ್ವಾಳ : ನೇತ್ರಾವತಿ ನದಿ ತೀರದಲ್ಲಿರುವ ಮನೆಯ ಅಂಗಳಕ್ಕೆ ಬೃಹತ್ ಗಾತ್ರದ ಮೊಸಳೆಯೊಂದು ಎಂಟ್ರಿ ಕೊಟ್ಟಿದೆ.

ನೇತ್ರಾವತಿ ತೀರದಿಂದ ಸುಮಾರು 200 ಮೀ ದೂರದಲ್ಲಿರುವ ನೆಕ್ಕಿಲಾರು ರಾಜೇಶ್ ನಾಯಕ್ ಎಂಬವರ ಮನೆಯ ಅಂಗಳಕ್ಕೆ ಸುಮಾರು 7 ಅಡಿ ಉದ್ದದ ಮೊಸಳೆ ಬಂದಿರೋದು ನೋಡಿ ಮನೆಯವರು ಶಾಕ್ ಆಗಿದ್ದಾರೆ.

ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮನೆಯ ಹೊರಗೆ ಶಬ್ದ ಕೇಳಿ ಬಂತು ಎಂಬ ಕಾರಣಕ್ಕಾಗಿ ಹೊರಗೆ ಬಂದು ನೋಡಿದಾಗ ಅಂಗಳದಲ್ಲಿ ಮೊಸಳೆ ಕಂಡು ಬಂದಿದೆ. ಬಳಿಕ ಮೊಸಳೆ ಎದುರಿನ ತೋಟದ ಕಡೆಗೆ ತೆರಳಿದೆ. ಎಂದು ಮನೆಯವರು ತಿಳಿಸಿದ್ದಾರೆ.