


ಬೆಂಗಳೂರು: ಇತ್ತೀಚೆಗೆ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಸಿನಿಮಾ ಪ್ರಚಾರಕ್ಕಾಗಿ ಹೇಗೆಲ್ಲಾ ಕೀಳುಮಟ್ಟಕ್ಕಿಳಿಯುತ್ತಿದ್ದಾರೆ ಅನ್ನೋದಕ್ಕೆ ಅಮುಕು ಡುಮುಕು ಮಂಜು ಘಟನೆ ತಾಜಾ ಉದಾಹರಣೆಯಾಗಿದೆ. ಸೂರಿ ಅಣ್ಣ ಸಿನಿಮಾದ ಪ್ರಚಾರಕ್ಕಾಗಿ ನಕಲಿ ಪೆಟ್ರೋಲ್ ಸೇವಿಸಿದ್ದ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ವಿರುದ್ಧ ಕೇಸ್ ದಾಖಲಾಗಿದೆ.
ಸೂರಿ ಅಣ್ಣ ಸಿನಿಮಾಗಾಗಿ ಮಂಜು ʻಅಮುಕು ಡುಮುಕುʼ ಮಂಜು ಪೆಟ್ರೋಲ್ ಕುಡಿದಂತೆ ಡ್ರಾಮಾ ಮಾಡಿ ಅಂಧಾಭಿಮಾನ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೆಜೆಸ್ಟಿಕ್‌ನ ಥಿಯೇಟರ್ ಒಂದರಲ್ಲಿ ಸೂರಿ ಅಣ್ಣ ಫಿಲ್ಮ್ ಹೀರೊ ಮುಂದೆ ನಕಲಿ ಪೆಟ್ರೋಲ್ ಕುಡಿದು ಮಂಜು ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿದ್ದಾನೆ.


