


ಪುತ್ತೂರು : ಫೆಬ್ರವರಿ 22 ರಂದು ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಗೌಡ್ರ ಕಪ್ ಸೀಸನ್ 2 ನೆರವೇರಿತು.

ಬೆಳಗ್ಗೆ 8 ಗಂಟೆಗೆ ಸರಿಯಾಗಿ 10 ಆಯ್ದ ತಂಡಗಳ ಪಂದ್ಯಾಟವು ಆರಂಭವಾಗಿ ಸಂಜೆ 7 ಗಂಟೆಗೆ ಸಮಾರೋಪದೊಂದಿಗೆ ಸಂಪನ್ನಗೊಂಡಿತು.



ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಸಂಜೀವ ಮಠದೂoರ್, ಚಿದಾನಂದ ಬೈಲಾಡಿ, ಯುವನಾಯಕರಾದ ಪ್ರಸನ್ನ ದರ್ಬೆ, ನಾಗೇಶ್ ಟಿ. ಎಸ್, ಚೆನ್ನಪ್ಪ ಗೌಡ ಕೋಲಾಡಿ, ಸುಂದರ ಗೌಡ ನಡುಬೈಲು, ರಾಜೇಶ್ ಬಿ, ಅಮರನಾಥ ಗೌಡ, ಚಂದ್ರಶೇಖರ ಗುಂಡೋಳೆ, ಪೂರ್ಣಿಮಾ ಚೆನ್ನಪ್ಪ ಗೌಡ, ಕುಸುಮ ಚಂದಪ್ಪ ಗೌಡ, ಶರತ್ ಬಲ್ನಾಡು, ಸತೀಶ್ ಒಳಗುಡ್ಡೆ, ಪ್ರಶಾಂತ್ ಕೆಮ್ಮಾಯಿ, ಯತೀಶ್ ದೇವ, ಮತ್ತು ಅನೇಕ ಗಣ್ಯರು ಭಾಗವಹಿಸಿದ್ದರು.

ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕೀರ್ತಿ ಗೌಡ, ಮನ್ವಿತ್ ಗೌಡ, ಲೋಕೇಶ್ ಪುತ್ತೂರು ಇವರಿಗೆ ಸನ್ಮಾನಿಸಲಾಯಿತು.

ವಿಶೇಷ ಆಹ್ವಾನಿತರಾಗಿ ಕಿರಿಯ ವಯಸ್ಸಿನ ಸಾಧಕ ವೀಕ್ಷಕ ವಿವರಣೆಗಾರ ಜಶ್ವಿನ್ ಗೌಡ ಪಂದ್ಯಾಟದ ವೀಕ್ಷಕ ವಿವರಣೆಯನ್ನು ಮಾಡಿದರು.
ಗೌಡ್ರ ಕಪ್ 2026 ರ ಪ್ರಥಮ ಸ್ಥಾನ ಶ್ರೀ ಮಾತಾ ಮರೀಲ್,. ದ್ವಿತೀಯ ಸ್ಥಾನ ಚಿಕ್ಕಮುಡ್ನೂರು ಬುಲ್ಸ್, ತೃತೀಯ ಸ್ಥಾನ ಒಕ್ಕಲಿಗ ವಾರಿಯರ್ಸ್,. ಚತುರ್ಥ ಸ್ಥಾನ ಈಗಲ್ ಗೈಸ್ ಕುರಿಯ
ಈ ಪಂದ್ಯಾಟದ ವಸಂತ ಗೌಡ ನೆಕ್ರಾಜೆ, ಪೃಥ್ವಿರಾಜ್ ಕುಬಲಾಜೆ, ಗುರುಪ್ರಸಾದ್ ಸಾಜ, ಕಿರಣ್ ಬೆದ್ರಾಳ, ಗಣೇಶ್ ಕೆಮ್ಮಾಯಿ, ನಿಶ್ಚಲ್ ಮುಕ್ವೆ, ಸತೀಶ್ ತೆಂಕಿಲ ರವರು ಆಯೋಜನೆ ಮಾಡಿದರು.
