


ಪುತ್ತೂರು: ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯವರ ಪೂರ್ತಿ ತಂಡ ಬಂದರೂ ನಾನು ಚಾಲೆಂಜಿಗೆ ಸಿದ್ದ. ನಾನು ಅವರ ವೇದಿಕೆಗೆ ಹೋಗುವ ಬದಲು. ಜನ ವೇದಿಕೆಯಲ್ಲಿ ಉತ್ತರ ಕೊಡುತ್ತೇನೆ. ಅವರು ಕೂಡಾ ಸಾಮೂಹಿಕ ವೇದಿಕೆಯಲ್ಲೇ ಉತ್ತರ ಕೊಡಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ತಿರುಗೇಟು ನೀಡಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ನಾರಾಯಣ ಸ್ವಾಮಿ ಅವರ ಪೂರ್ತಿ ತಂಡ ಬಂದರೂ ನಾನು ಚಾಲೆಂಜಿಗೆ ಸಿದ್ದ. ಅವರು ನನ್ನ ವೇದಿಕೆಗೆ ಬರಬೇಕು. ನಾನು ಇಲ್ಲಿ ಶಾಸಕ. ಅವರ ವೇದಿಕೆಗೆ ನಾನು ಹೋಗುವ ಬದಲು ಅವರು ಒಂದು ಸಾಮೂಹಿಕ ವೇದಿಕೆ ಸೃಷ್ಟಿ ಮಾಡಲಿ. ನಾನು ಉತ್ತರ ಕೊಡುತ್ತೇನೆ. ಅವರು ಕೂಡಿದರೆ ಸಾಮೂಹಿಕ ವೇದಿಕೆಯಲ್ಲಿ ಉತ್ತರ ಕೊಡಲಿ. ಜನರ ವೇದಿಕೆಯಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದರು.


ನಾಯಿ ಕಳ್ಳ ಬಂದರೂ ಬೊಗಳುತ್ತದೆ ಒಳ್ಳೆಯವರು ಬಂದರೂ ಬೊಗಳುತ್ತದೆ. ನಾಯಿಗೆ ಯಾರು ಒಳ್ಳೆಯವರು, ಯಾರು ಕೆಟ್ಟವನೂ ಅಂತ ಗೊತ್ತಾಗುವುದಿಲ್ಲ. ಅದಕ್ಕೆ ಯಾವುದು ಏನು ಅಂತ ಗೊತ್ತಾಗುವುದಿಲ್ಲ. ಅದಕ್ಕೆ ಕಲ್ಲು ಬಿಸಾಕುವಂತಿಲ್ಲ. ಅದು ಪ್ರಾಣಿ ಎಂದು ಶಾಸಕರು ಹೇಳಿದರು.
ಮೇಲ್ಗಡೆಯಿಂದ ಬಂದು ಏನೆನೋ ಹೇಳಿ ಹೋಗುತ್ತವೆ.
ಯಾರಿಗೂ ಎಷ್ಟು ವರ್ಷ ಅಧಿಕಾರ ಇರುತ್ತದೆಯೋ ಯಾರು ಎಮ್‌ಎಲ್‌ಎ ಆಗುತ್ತಾರೋ ಯಾರು ಮಂತ್ರಿಯಾಗಿದ್ದಾರೋ ಆದರೆ ಯಾರೂ ಪರ್ಮನೆಂಟ್ ಇಲ್ಲ. ಸುಮ್ಮನೆ ಇದ್ದವರನ್ನು ತಂದು ಮಾತನಾಡಿಸಿ, ನಮ್ಮ ಬಾಂಧವ್ಯ ಯಾಕೆ ಹಾಳು ಮಾಡುವುದು. ಇದಕ್ಕೆ ಬುದ್ದಿ ಇಲ್ಲ. ಈ ಕುರಿತು ನಮ್ಮ ಬಾಂಧವ್ಯ ಹಾಳಗದಂತೆ ನಾನು ಬಿಜೆಪಿಯ ಬಂಧುಗಳಲ್ಲಿ ವಿನಂತಿ ಮಾಡುತ್ತೇನೆ ಎಂದು ಹೇಳಿದರು.
