ಕೇರಳದಿಂದ ಮಧ್ಯಪ್ರದೇಶಕ್ಕೆ 100 ವರ್ಷಗಳಿಗೂ ಹೆಚ್ಚಿನ ಜೀವನ ಪಯಣದಲ್ಲಿ ದಾದಿ ಮಾ, ನಾನಿ ಮಾ ಎಂಬ ಹೆಸರುಗಳನ್ನು ಗಳಿಸಿದ್ದ ಏಷ್ಯಾದ ಅತ್ಯಂತ ಹಿರಿಯ ಹೆಣ್ಣು ಆನೆ ವತ್ಸಲಾ ಮಂಗಳವಾರ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ (ಪಿಟಿಆರ್) ಅಸುನೀಗಿದೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮತ್ತು ಪಶುವೈದ್ಯರ ವೀಕ್ಷಣೆಯಲ್ಲಿದ್ದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರೀತಿಯ ಆನೆ ಕೊನೆಯುಸಿರೆಳೆದಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.