ಉಡುಪಿ: ಓಮನ್ ನೌಕೆಯಲ್ಲಿ ಭಾರತದ ಸಮುದ್ರ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪಿಗಳಿಗೆ ದಂಡ ವಿಧಿಸಲಾಗಿದೆ.

ಫೆಬ್ರವರಿಯಲ್ಲಿ ಮಂಗಳೂರು ಕರಾವಳಿ ಕಾವಲು ಪಡೆಯ ಅಧಿಕಾರಿ ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದಾಗ ಓಮನ್ ನಿಂದ ಬಂದ ದೋಣಿಯನ್ನು ಪತ್ತೆ ಹಚ್ಚಿದ್ದಾರೆ. ಅಕ್ರಮ ಪ್ರವೇಶದ ಹಿನ್ನೆಲೆ ಮಲ್ಪೆ ಪೊಲೀಸರು ದೂರು ದಾಖಲಿಸಿ ಬಂಧಿಸಲಾಯಿತು.

ಜೇಮ್ಸ್ ಫ್ರಾಂಕ್ಲಿನ್, ರಾಬಿನ್ ಸ್ಟನ್, ಟಿರೋಸ್ ಯಾನೆ ಡಿರೋಜ್ ಮೀನುಗಾರಿಕಾ ಉದ್ಯೋಗಕ್ಕಾಗಿ ಓಮನ್ ಗೆ ತೆರಳಿದ್ದರು. ಆದರೆ ಅಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ ಇವರಿಗೆ ಭಾರತ ತಲುಪಲು ಕಾನೂನುಬದ್ಧ ಮಾರ್ಗಗಳಿರಲಿಲ್ಲ ಎಂದು ತಿಳಿದುಬಂದಿದೆ.

ಇದೀಗ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಭಾರತದ ಜಲಪ್ರದೇಶದ ಮೂಲಕ ಅಕ್ರಮವಾಗಿ ಪ್ರವೇಶಿಸಿದ ಇವರಿಗೆ ಎಂಭತ್ತು ಸಾವಿರ ರೂ. ದಂಡ ವಿಧಿಸಿದೆ.