Akshaya Sharadhotsava
Darbe Salon
Mahalingeshwara Car Air Condition
New Dot Dress Mart

ದಿನಾಂಕ 13.06.2026ರಂದು ದ. ಕ.ಜಿ.ಪಂ ಸ. . ಉ ಹಿ. ಪ್ರಾ.
ಶಾಲೆ ಬಲ್ನಾಡು ಇಲ್ಲಿಗೆ ಅಗತ್ಯವಾದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಪೀಠೋಕಪರಣಗಳನ್ನು ರೋಟರಿ ಯುವ ಪುತ್ತೂರು ಸಂಸ್ಥೆಯ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.

Out Look Fashion

ಪೀಠೋಪಕರಣ ಹಸ್ತಾಂತರದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ರೋಟರಿ ಯುವ ಅಧ್ಯಕ್ಷರಾದ ಶ್ರೀ ಕುಸುಮರಾಜ್ SK,ಕಾರ್ಯದರ್ಶಿಯಾದ ಅಭೀಷ್ ಕೆ , ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಗೌರ್ನರ್r ಗಳಾದ ಶ್ರೀಮತಿ ಪ್ರಮೀಳಾ ರಾವ್, ಡಿಸ್ಟ್ರಿಕ್ಟ್ ಚೇರ್ಮನ್ ಆದ ಶ್ರೀ ಆಸ್ಕರ್ ಆನಂಧ್, ಜೋನಲ್ ಲೆಫ್ಟಿನೆಂಟ್ ಗಳಾದ ಶ್ರೀ ಭರತ್ ಪೈ, ಶ್ರೀ ಪಶುಪತಿ ಶರ್ಮಾ, ಶ್ರೀಮತಿ ವಚನ ಜಯರಾಮ್, ಶ್ರೀಮತಿ ಅಶ್ವಿನಿ ಮುಳಿಯ,ಪುತ್ತೂರು ನಗರಸಭಾ ಸದಸ್ಯರಾದ ಪೂರ್ಣಿಮಾ ಕೋಡಿಯಡ್ಕ, ಬಲ್ನಾಡು ಗ್ರಾಮಪಂಚಾಯತ್ ಸದಸ್ಯರಾದ ಶ್ರೀ ಬಾಲ ಸುಬ್ರಹ್ಮಣ್ಯ ಕೋಟ್ಯಾನ್, ಶಾಲಾ SDMC ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಪೂಜಾರಿ ನಾಗಾಗದ್ದೆ, ಶಾಲಾ ಮುಖ್ಯಶಿಕ್ಷಕರಾದ ಶ್ರೀಮತಿ ಭವಾನಿ ಎಂ ಇವರು ಉಪಸ್ಥಿತರಿದ್ದರು.

Jaya Refrigeration and Air Condition

ಕಾರ್ಯಕ್ರಮದಲ್ಲಿ ಪೋಷಕರು,SDMC ಯವರು ಹಿರಿಯ ವಿದ್ಯಾರ್ಥಿ ಮತ್ತು ವಿದ್ಯಾಭಿಮಾನಿಗಳ ಸಂಘದವರು ವಿನಾಯಕ ಚಾರಿಟಬಲ್ ಟ್ರಸ್ಟ್ ಮತ್ತು ಕಟ್ಟೆ ಫ್ರೆಂಡ್ಸ್ ಬಲ್ನಾಡು ಇವರು ಭಾಗವಹಿಸಿದ್ದರು. ಶಾಲಾ GPT ಶಿಕ್ಷಕರಾದ ಮಂಜಪ್ಪ ಇವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕರಾದ ಭವಾನಿ ಇವರು ಸ್ವಾಗತಿಸಿ ಅಭಿಷ್ ಕೆ ಇವರು ವಂದಿಸಿದರು.