Akshaya Sharadhotsava
Darbe Salon
Mahalingeshwara Car Air Condition
New Dot Dress Mart

ನವದೆಹಲಿ: ಇತ್ತೀಚೆಗೆ ನಡೆದ 5. 000 ಕೋಟಿ ರೂ. ಮೌಲ್ಯದ ನಕಲಿ ಔಷಧ ಜಾಲ ಪ್ರಕರಣದ ತನಿಖೆ ವೇಳೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣ ಮುಚ್ಚಿಹಾಕಲು ಪೊಲೀಸರು ಆರೋಪಿಯಿಂದ ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಿಬಿಐ ತಿಳಿಸಿದೆ.

Out Look Fashion

ಈ ಆರೋಪದ ಮೇಲೆ ದೆಹಲಿ ಪೊಲೀಸ್ ಕ್ರೈಂ ಬ್ರ‍್ಯಾಂಚ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್ ಮತ್ತು ರಾಜ್‌ಕುಮಾರ್ ಬಂಧಿಸಲಾಗಿದೆ.

Jaya Refrigeration and Air Condition

ಈ ಇಬ್ಬರು ಆರೋಪಿಗಳು ಪುದುಚೇರಿ ಮೂಲದ ನಕಲಿ ಔಷಧ ಪ್ರಕರಣದ ಪ್ರಮುಖ ಆರೋಪಿ ಎನ್. ರಾಜಾ ಅಲಿಯಾಸ್ ವಳ್ಳಿಯಪ್ಪನ್ ಬಳಿ 3 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1.5 ಕೋಟಿ ರೂ. ಮುಂಗಡವಾಗಿ ನೀಡುವಂತೆ ಕೇಳಿಕೊಂಡಿದ್ದರು. ಸಿಬಿಐ ತನಿಖೆ ವೇಳೆ ಆರೋಪಿ ರಾಜಾ 1 ಕೋಟಿ ರೂ. ಹಣವನ್ನು ಪ್ರದೀಪ್ ಕುಮಾರ್ ಸಿಂಗ್‌ಗೆ ತಲುಪಿಸಿದ್ದಾನೆ. ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಪ್ರಭಾವಿ ಸರ್ಕಾರಿ ಅಧಿಕಾರಿಗಳ ಮನವೊಲಿಸಿ ಕೇಸ್ ಮುಚ್ಚಿಸುತ್ತೇವೆ ಎಂದು ಹಣ ಪಡೆಯಲಾಗಿತ್ತು ಎಂದು ಸಿಬಿಐ ತಿಳಿಸಿದೆ.