Tamanvi Silk
Darbe Salon
Mahalingeshwara Car Air Condition
ಬಿಜೆಪಿಯ ಅಚ್ಚರಿ ಅಭ್ಯರ್ಥಿ ಕಟೀಲ್ ಆಗಲಿದ್ದಾರಾ?

ಬೆಂಗಳೂರು: ಕರ್ನಾಟಕದ ರಾಜಕೀಯ ವಲಯದಲ್ಲಿ ರಾಜ್ಯಸಭೆ ಚುನಾವಣೆಯದ್ದೇ ಈಗ ಭಾರಿ ಚರ್ಚೆ. ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತಾಗಿ ಹಲವು ಹೆಸರುಗಳು ಕೇಳಿಬರುತ್ತಿದ್ದು, ಅಂತಿಮವಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Out Look Fashion

ಈ ನಡುವೆ ಮಾಜಿ ದಕ್ಷಿಣ ಕನ್ನಡ ಸಂಸದ Nalin Kumar Kateel ಅವರ ಹೆಸರು ಕೂಡ ರಾಜ್ಯಸಭೆ ರೇಸ್‌ನಲ್ಲಿ ಕೇಳಿಬರುತ್ತಿದೆ. ಸಂಘಟನಾ ಹಿನ್ನೆಲೆ ಹಾಗೂ ಪಕ್ಷದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ರಾಜ್ಯಸಭೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

Jaya Refrigeration and Air Condition

ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಆಯ್ಕೆಯನ್ನು ಕೊನೆಯ ಕ್ಷಣದವರೆಗೂ ಗೌಪ್ಯವಾಗಿಟ್ಟಿರುವ ಹಿನ್ನೆಲೆಯಲ್ಲಿ ಹಲವು ಊಹಾಪೋಹಗಳು ಮೂಡಿವೆ. ಅಂತಿಮವಾಗಿ ಪಕ್ಷದ ಆಯ್ಕೆ ಯಾರ ಮೇಲೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯಸಭೆ ಅಭ್ಯರ್ಥಿ ಘೋಷಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.