Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, ಇನ್ನೂ ದಾಖಲೆ ಪರಿಶೀಲನೆ ಮಾಡಿಕೊಳ್ಳದ ಅಭ್ಯರ್ಥಿಗಳು ಅಗತ್ಯ ಮೂಲ ದಾಖಲೆಗಳ ಸಮೇತ ಹತ್ತಿರದ ಸರ್ಕಾರಿ ಪಿಯು ಕಾಲೇಜುಗಳಿಗೆ ಮೇ 21 ರ ಒಳಗೆ ಹೋಗಿ ಪರಿಶೀಲನೆ ಮಾಡಿಸಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೂಚಿಸಿದೆ.

Out Look Fashion

ಅಭ್ಯರ್ಥಿಗಳ ಕ್ಲೇಮ್ಸ್ ಸರ್ಟಿಫಿಕೇಟ್ ನಲ್ಲಿ ಕ್ಲೇಮ್ಸ್ ನಾಟ್ ವೆರಿಫೈಯ್ಡ್ ಎಂದು ಮುದ್ರಿತವಾಗಿದ್ದಲ್ಲಿ ಅಂತಹವರು ಮಾತ್ರ ಸರ್ಕಾರಿ ಪಿಯು ಕಾಲೇಜಿಗೆ (Government PU College) ಹೋಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

Jaya Refrigeration and Air Condition

ಈ ಹಿಂದೆ ಅವಕಾಶ ನೀಡಿದ್ದಾಗಲೂ ಕೆಲವು ಅಭ್ಯರ್ಥಿಗಳು ತಮ್ಮ ಕಾಲೇಜುಗಳಲ್ಲಿ ದಾಖಲೆ ಪರಿಶೀಲನೆ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಕ್ಲೇಮ್ಡ್ ಮತ್ತು ವೆರಿಫೈಯ್ಡ್ ಎಂದು ಅರ್ಜಿಯಲ್ಲಿ ಮುದ್ರಿತವಾಗಿರುವವರು ದಾಖಲೆ ಪರಿಶೀಲನೆಗೆ ಹೋಗುವ ಅಗತ್ಯ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮಾಧ್ಯಮ ವ್ಯಾಸಂಗ, ಗ್ರಾಮೀಣ ವ್ಯಾಸಂಗ, ಭಾಷಾ ಅಲ್ಪಸಂಖ್ಯಾತ, ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ ಕ್ಲೇಮ್ ಮಾಡಿ, ಕ್ಲೇಮ್ಸ್ ಸರ್ಟಿಫಿಕೇಟ್ ನಲ್ಲಿ ನಾಟ್ ವೆರಿಫೈಯ್ಡ್ (Not verified) ಎಂದು ಮುದ್ರಿತವಾಗಿರುವವರು ಮಾತ್ರ ಕಾಲೇಜುಗಳಿಗೆ ಹೋಗಿ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.