Akshaya Sharadhotsava
Darbe Salon
Mahalingeshwara Car Air Condition
New Dot Dress Mart


Out Look Fashion

ವಾಷಿಂಗ್ಟನ್: ಐತಿಹಾಸಿಕ 10 ದಿನಗಳ ಚಂದ್ರಯಾನದ ನಂತರ ನಾಸಾದ (NASA) ಆರ್ಟೆಮಿಸ್ II (Artemis 2) ಗಗನಯಾತ್ರಿಗಳು ಭೂಮಿಗೆ ಮರಳಿದ್ದಾರೆ. ಆರ್ಟೆಮಿಸ್ II ರ ಗಗನಯಾತ್ರಿಗಳು ಪೆಸಿಫಿಕ್‌ ಸಾಗರದಲ್ಲಿ ಸುರಕ್ಷಿತವಾಗಿ ಇಳಿದರು.

Jaya Refrigeration and Air Condition

ಸುಮಾರು 50 ವರ್ಷಗಳ ಬಳಿಕ ಚಂದ್ರನತ್ತ ಪ್ರಯಾಣ ಮಾಡಿ, 10 ದಿನಗಳ ಸುತ್ತಾಟ ನಡೆಸಿ ಭೂಮಿಗೆ ವಾಪಸ್‌ ಆಗುವ ನಾಸಾ ಯೋಜನೆ ‘ಆರ್ಟಿಮಿಸ್‌ 2’ ಯಶಸ್ವಿಯಾಗಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತು ಸಾಗಿದ್ದ ಓರಿಯನ್‌ ನೌಕೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಇಂದು ಮುಂಜಾನೆ 5:37ರ ಸುಮಾರಿಗೆ ಇಳಿಯಿತು. ಗಗನಯಾತ್ರಿಗಳು ಕ್ಯಾಪ್ಸುಲ್‌ನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಅವರು ಮಾಕ್ 33 – ಅಥವಾ ಶಬ್ದದ ವೇಗಕ್ಕಿಂತ 33 ಪಟ್ಟು ವೇಗದಲ್ಲಿ ಪ್ರಯಾಣಿಸುತ್ತಾ ಭೂಮಿಯ ವಾತಾವರಣದಲ್ಲಿ ಲ್ಯಾಂಡ್‌ ಆಗಿದ್ದಾರೆ.

ಏಪ್ರಿಲ್ 2 ರಂದು ಉಡಾವಣೆಯಾಗಿದ್ದ ಆರ್ಟೆಮಿಸ್ II, ನಾಸಾಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಅಪೋಲೋ 17 ರ ನಂತರ ಭೂಮಿಯ ಕೆಳ ಕಕ್ಷೆಯನ್ನು ದಾಟಿ ನಾಲ್ವರು ಗಗನಯಾತ್ರಿಗಳನ್ನು ಕಳುಹಿಸಿದ ಮೊದಲ ಯೋಜನೆ ಇದಾಗಿದೆ.