Tamanvi Silk
Darbe Salon
Mahalingeshwara Car Air Condition

ಉಡುಪಿ: ರಾಜ್ಯಾದ್ಯಂತ ಲೋಕಾಯುಕ್ತ ವಿವಿದೆಡೆ ಲೋಕಾಯುಕ್ತ ದಾಳಿ ನಡೆಸಿದ್ದು, ಉಡುಪಿ ಜಿಲ್ಲಾ ಅಬಕಾರಿ ಡಿಸಿ ಶ್ರೀನಿವಾಸ್ ಟಿ ಎಂ ಅವರ ಮನೆ ಸೇರಿ ಹಲವೆಡೆ ದಾಳಿ ನಡೆಸಲಾಗಿದ್ದು ಮಹತ್ವದ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

Out Look Fashion

ಮಾರ್ಚ್ 11 ಮತ್ತು 12 ರಂದು ಮಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಒಟ್ಟು 15 ಕಡೆ ಶೋಧ ಕಾರ್ಯ ನಡೆಸಲಾಗಿದೆ.

Jaya Refrigeration and Air Condition

ದಾಳಿಯ ವೇಳೆ ಅಧಿಕಾರಿಗಳಿಗೆ ಸಂಬಂಧಿಸಿದ 11 ನಿವೇಶನಗಳು, 6 ವಾಸದ ಮನೆಗಳು, ಮತ್ತು 31 ಎಕ್ರೆ ಕೃಷಿ ಭೂಮಿ ಸೇರಿ ಒಟ್ಟು ರೂ.6.90ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ ಒಂದೂವರೆ ಕೋಟಿಗೂ ಅಧಿಕ ನಗ ನಗದು ಸೇರಿ ಒಟ್ಟು 2.66 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

ಆಸ್ತಿ ಮೂಲದ ಬಗ್ಗೆ ಲೋಕಾ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.