Tamanvi Silk
Darbe Salon
Mahalingeshwara Car Air Condition

ಉಪ್ಪಿನಂಗಡಿಯ ರಾ ಹೆ ೭೫ ರ ಸರ್ವೀಸ್ ರಸ್ತೆಯಲ್ಲಿ
ಕಾರೊಂದಕ್ಕೆ ಶಾಲಾ ಮಕ್ಕಳನ್ನು
ಕರೆದೊಯ್ಯುತ್ತಿದ್ದ ಅಟೋ ರಿಕ್ಷಾವೊಂದು ಡಿಕ್ಕಿ
ಹೊಡೆದ ಪರಿಣಾಮ ಅಟೋ ರಿಕ್ಷಾದಲ್ಲಿದ್ದ ಐವರು
ವಿದ್ಯಾರ್ಥಿಗಳು ಸೇರಿದಂತೆ ೬ ಮಂದಿ ಗಾಯಗೊಂಡ
ಘಟನೆ ಸೋಮವಾರ ಸಾಯಂಕಾಲ ಸಂಭವಿಸಿದೆ.

Out Look Fashion


ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ
ವಿದ್ಯಾರ್ಥಿಗಳಾದ ಮಹಮ್ಮದ್ ಜಾಝೀಬ್ (೧೩) ,
ಮಹಮ್ಮದ್ ಇರ್ಷಾದ್ (೧೧) , ನೂರ್ ಮಹಮದ್ (೧೦) ಮಹಮದ್ ರಾಝೀಲ್ (೭) , ಸಜ್ಮಾ (೪) ಮತ್ತು ರಿಕ್ಷಾ
ಚಾಲಕ ಕಲಂದರ್ ಶಾಫಿ (೪೬) ಎಂಬವರು
ಗಾಯಗೊಂಡವರು. ೩೪ ನೇ ನೆಕ್ಕಿಲಾಡಿ
ನಿವಾಸಿಗರಾದ ಇವರುಗಳನ್ನು ಕಲಂದರ್ ಶಾಫಿ
ರವರು ಎಂದಿನAತೆ ತನ್ನ ರಿಕ್ಷಾದಲ್ಲಿ ಶಾಲೆಯಿಂದ
ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ
ದುರ್ಘಟನೆ ಸಂಭವಿಸಿದೆ.

Jaya Refrigeration and Air Condition


ಗಾಯಗೊಂಡ ಗಾಯಾಳುಗಳನ್ನು
ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ
ಚಿಕಿತ್ಸೆಗೆ ಒಳಪಡಿಸಿ , ಹೆಚ್ಚಿನ ಚಿಕಿತ್ಸೆಗಾಗಿ
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಹಾಗೂ
ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ.