Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್‌ ದಾಳಿಯಲ್ಲಿ ಹತ್ಯೆಯಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೋಲ್ಲಾ ಖಮೇನಿ ಸ್ಥಾನಕ್ಕೆ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇರಾನ್‌ ಅಧಿಕೃತವಾಗಿ ಘೊಷಿಸಿದೆ ಎಂದು ವರದಿಯಾಗಿದೆ.

Out Look Fashion

ಅವರ ಹೊಸ ಸ್ಥಾನವು ಇಸ್ಲಾಮಿಕ್ ಗಣರಾಜ್ಯದಲ್ಲಿ ಎಲ್ಲಾ ವಿಷಯಗಳಲ್ಲೂ ಅಧಿಕಾರವನ್ನು ನೀಡುತ್ತದೆ. ಇರಾನ್‌ ಆಯ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ನೂತನ ನಾಯಕ ಅಮೆರಿಕದ ಪರ ಅಭಿಪ್ರಾಯ ಹೊಂದಿರಬೇಕು ಎಂದು ಅವರು ಘೋಷಿಸಿದ್ದರು. ಆದರೆ ಅವರ ನಿರೀಕ್ಷೆ ಈಗ ಹುಸಿಯಾಗಿದೆ.

Jaya Refrigeration and Air Condition

ನೂತನ ನಾಯಕನ ಆಯ್ಕೆಗೆ ಇರಾನ್ ನಮ್ಮಿಂದ ಅನುಮೋದನೆ ಪಡೆಯದಿದ್ದರೆ ಅವರು ಹೆಚ್ಚು ಕಾಲ ಉಳಿಯುವುದಿಲ್ಲ. ಇಸ್ರೇಲ್ ಪಡೆ ಇರಾನ್‌ನ ಹೊಸ ಸರ್ವೋಚ್ಚ ನಾಯಕನನ್ನು ಗುರಿಯಾಗಿಸಿಕೊಳ್ಳುವುದಾಗಿ ಬೆದರಿಕೆ ಹಾಕಿತ್ತು.

ಇರಾನ್‌ನ ಆಡಳಿತದ ಸಿದ್ಧಾಂತವು ಆನುವಂಶಿಕ ಉತ್ತರಾಧಿಕಾರದ ತತ್ವವನ್ನು ತಿರಸ್ಕರಿಸಿದೆ. ಆದರೂ ಸೇನೆ ಮತ್ತು ಅವರ ಮೃತ ತಂದೆಯ ಪ್ರಬಲ ಅನುಯಾಯಿಗಳು ಇನ್ನೂ ಕಚೇರಿಯಲ್ಲಿ ಇದ್ದಾರೆ. ಇದೇ ಕಾರಣಕ್ಕೆ ಮೊಜ್ತಬಾ ಅವರ ಆಯ್ಕೆಯಾಗಿದೆ.