Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಕತಾರ್‌: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ಗೂಢಚಾರರು ಎಂಬ ಶಂಕೆ ಮೇಲೆ 10 ಮಂದಿಯನ್ನು ಕತಾರ್‌ನಲ್ಲಿ ಬಂಧಿಸಲಾಗಿದೆ.

Out Look Fashion

ದೇಶದ ನಿರ್ಣಾಯಕ ಮತ್ತು ಮಿಲಿಟರಿ ಮೂಲಸೌಕರ್ಯದ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಲು ಏಳು ಶಂಕಿತರಿಗೆ ಬೇಹುಗಾರಿಕೆ ಕಾರ್ಯಾಚರಣೆಗಳನ್ನು ವಹಿಸಲಾಗಿತ್ತು. ಬೇಹುಗಾರಿಕೆ ಆರೋಪ ಹೊತ್ತಿರುವ ಇತರ ಮೂವರು ಡ್ರೋನ್‌ಗಳನ್ನು ನಿರ್ವಹಿಸುವಲ್ಲಿ ತರಬೇತಿ ಪಡೆದಿದ್ದರು ಎಂದು ವರದಿಯಾಗಿದೆ.

Jaya Refrigeration and Air Condition

ತನಿಖೆಯ ಸಮಯದಲ್ಲಿ ಶಂಕಿತರು ಇರಾನಿನ ರೆವಲ್ಯೂಷನರಿ ಗಾರ್ಡ್‌ನೊಂದಿಗೆ ಸಂಪರ್ಕದಲ್ಲಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಬೇಹುಗಾರಿಕೆ ಮತ್ತು ವಿಧ್ವಂಸಕ ಕಾರ್ಯಾಚರಣೆಗಳನ್ನು ನಡೆಸಲು ಅವರನ್ನು ನಿಯೋಜಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.