




ಕಡಬ: ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇದರ ವಾರ್ಷಿಕ ಹಬ್ಬ ಪ್ರತಿಭೋತ್ಸವ ಕಾರ್ಯಕ್ರಮ ಡಿ 27 ಶನಿವಾರದಂದು ನಡೆಯಿತು.


ಈ ಕಾರ್ಯಕ್ರಮವು ಅತಿಥಿಗಳಿಂದ ದೀಪ ಬೆಳಗಿಸುವುದರ ಮೂಲಕ ಆರಂಭವಾಯಿತು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಸಭಾ ಕಾರ್ಯಕ್ರಮ ನೆರವೇರಿತು.


ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಡಾ| ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದ್ದರು.ವಿಶೇಷ ಅಭ್ಯಾಗತರಾಗಿ ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿ, ಶ್ರೀ ಎಸ್ ಗಿರೀಶ್, ಡಾ|| ಯೋಗೀಶ್, ಶ್ರೀ ಎಸ್ ಬಾಲಕೃಷ್ಣ ಶೆಟ್ಟಿ ಮತ್ತು ಶ್ರೀ ಮಿಥುನ್ ಜಿ ಎಸ್ ರವರು ವಹಿಸಿದ್ದರು.

ಸಭಾ ಕಾರ್ಯಕ್ರಮದ ನಂತರ 1.30 ರಿಂದ 6 ಗಂಟೆಯ ತನಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
