




ಪುತ್ತೂರು : ಶ್ರೀನಿವಾಸ ಕಲ್ಯಾಣದಿಂದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತರವರನ್ನು ಹೊರಗೆ ಹಾಕಿದ ಘಟನೆ ಭಾನುವಾರದಂದು ನಡೆದಿತ್ತು. ಈ ಘಟನೆಯ ಪರಿಣಾಮ ಇಂದು ಪ್ರಸನ್ನ ಮಾರ್ತಾ ರವರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

ಇದೀಗ ನಿಕಟಪೂರ್ವ ರಾಜ್ಯಾಧ್ಯಕ್ಷ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಪ್ರಸನ್ನ ಮಾರ್ತಾರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
