Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದ್ದಂತೆ ಸ್ಥಳ ಮಹಜರು ಬಗ್ಗೆ ಸೌಜನ್ಯಾ ಮಾವ ವಿಠಲಗೌಡ ಅವರ ಸ್ಫೋಟಕ ಹೇಳಿಕೆಯ ವೀಡಿಯೋ ವೈರಲ್ ಆಗಿದೆ.

Out Look Fashion

ಬಂಗ್ಲೆಗುಡ್ಡೆಕ್ಕೆ ತನ್ನನ್ನು ಎರಡು ಸಲ‌ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅಸ್ಥಿಪಂಜರ ದೊರಕಿತ್ತು. ಮೊದಲನೇ ಬಾರಿ ಮೂರು ಮಾನವ ಕಳೇಬರ ಸಿಕ್ಕಿದೆ. ಎರಡನೇ ಬಾರಿ ಐದು ಮಾನವ ಕಳೇಬರ ದೊರಕಿದೆ. ಸಣ್ಣ ಮಗುವಿನ ಎಲುಬೂ ಕೂಡಾ ಇದ್ದ ಹಾಗಿತ್ತು. ಮೂಳೆಗಳು ದೊರಕಿದ್ದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವ ಕಲಶಗಳೂ ಇವೆ. ಅಧಿಕಾರಿಗಳಿಗೆ ಆ ವಿಚಾರವನ್ನು ಹೇಳಿದ್ದೇನೆ ಎಂದಿದ್ದಾರೆ.

Jaya Refrigeration and Air Condition

ಗುಡ್ಡದ ನಡುವೆ ಮಣ್ಣು ಜರಿದ ಸ್ಥಿತಿಯಲ್ಲಿದೆ. ಆ ಜಾಗದಲ್ಲಿ ನಾಲ್ಕೈದು ಫೀಟ್ ಅಡಿಯಲ್ಲಿ ಎಲುಬುಗಳ ರಾಶಿ ಇರಬಹುದು. ಎಲುಬುಗಳು ಅಲ್ಲಲ್ಲಿ ಚದುರಿಕೊಂಡ ಸ್ಥಿತಿಯಲ್ಲಿದೆ. ಬುರುಡೆಗಳು ಸ್ಪಷ್ಟವಾಗಿ ಕಾಣಸಿಗುತ್ತದೆ. ಎರಡೂ ಸಲ ನೋಡಿದ್ದನ್ನೂ ಅಧಿಕಾರಿಗಳು ಮುಟ್ಟಿಲ್ಲ. ಎಲ್ಲವೂ ಅದೇ ಸ್ಥಿತಿಯಲ್ಲಿದೆ ಎಂದು ವಿಠಲಗೌಡ ಹೇಳಿದ್ದಾರೆ.

ನಾನು ಅಧಿಕಾರಿಗಳಿಗೆ ಹೇಳಿದ್ದೇನೆ‌. ನಾನು ಯಾವತ್ತೂ ತನಿಖೆಗೆ ಸಿದ್ಧನಿದ್ದೇನೆ. ಚಿನ್ನಯ್ಯ, ತಾನಾಸಿ, ರಂಗ, ಸುಬ್ರಹ್ಮಣ್ಯ ಕೊಟ್ಟ ಮಾಹಿತಿ ಪ್ರಕಾರ ತೋರಿಸಲು ತಯಾರಿದ್ದೇನೆ. ಎಸ್ಐಟಿ ಕರೆದರೆ ಎಲ್ಲಾ ಪ್ರದೇಶವನ್ನು ನಾನು ತೋರಿಸುತ್ತೇನೆ. ಅದೇ ಊರಿನಲ್ಲಿದ್ದು ಆ ಬುರುಡೆಗಳನ್ನು ನೋಡಿದಾಗ ಆಶ್ಚರ್ಯ ಆಗಿದೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ ಅದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ವಿಠಲಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.