




ಮಂಡ್ಯ- ಮಂಡ್ಯದ ಮದ್ದೂರಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿರುವಾಗ ಮುಸ್ಲಿಮರು ಕಲ್ಲು ಎಸೆದಿದ್ದರು. ಅದಾದ ಬಳಿಕ ದೊಡ್ಡ ಗಲಾಟೆಯೇ ನಡೆಯಿತು. ಅದರ ಬೆನ್ನಲ್ಲೇ ಇಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮದ್ದೂರಿಗೆ ಭೇಟಿ ನೀಡಿದ್ದರು.

ʼಇಡೀ ಕರ್ನಾಟಕದಲ್ಲಿ ಗಂಡು ಮೆಟ್ಟಿದ ಜಿಲ್ಲೆ ಮಂಡ್ಯ. ನಾವೆಲ್ಲ ಒಂದು..ನಾವೆಲ್ಲ ಹಿಂದು, ಇನ್ಮುಂದೆ ನಾವು ಜಾತಿ ನೋಡಿ ವೋಟು ಹಾಕಬಾರದುʼ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರಿಸಿದರು. ಗಣೇಶ ವಿಸರ್ಜನೆ ವೇಳೆ ಮುಸ್ಲಿಮರಿಂದ ಕಲ್ಲು ತೂರಾಟ ನಡೆದು, ಗಲಾಟೆ ನಡೆದ ಮದ್ದೂರಿಗೆ ಇಂದು ಭೇಟಿ ನೀಡಿದರು. ಅಚ್ಚರಿಯೆಂಬಂತೆ..ಅವರಿಗೆ ಮದ್ದೂರಲ್ಲಿ ಭಾರಿ ಸ್ವಾಗತ ಸಿಕ್ಕಿತು. ಯತ್ನಾಳ್‌ರನ್ನ ನೋಡಿ ಮಂಡ್ಯ ಜನರು ಸಿಕ್ಕಾಪಟ್ಟೆ ಖುಷಿಯಾದರು. ನಿನ್ನೆ, ಮೊನ್ನೆ ಅಲ್ಲಿಗೆ ತೆರಳಿದ್ದ ಬಿಜೆಪಿ ನಾಯಕರಿಗಿಂತಲೂ ಹೆಚ್ಚಿನ ಮನ್ನಣೆ ಇಂದು ಯತ್ನಾಳ್‌ರಿಗೆ ಸಿಕ್ಕಿದೆ. ಮಂಡ್ಯ ಜನತೆ ಎದುರು ಅವರು ಭಾಷಣ ಮಾಡಿದ್ದಲ್ಲದೆ, ಹೊಸ ಪಕ್ಷ, ಹೊಸ ಚಿಹ್ನೆಯನ್ನೂ ಘೋಷಣೆ ಮಾಡಿದ್ದಾರೆ. ಈ ಮೂಲಕ ತಮ್ಮನ್ನ ಉಚ್ಚಾಟಿಸಿದ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

