



ಹಿಂದೂಗಳೊoದಿಗೆ ಸೌಹಾರ್ದಯುತವಾಗಿ ಬದುಕಲು ಸಾಧ್ಯವಿಲ್ಲದಿದ್ದರೆ ೭೫ ವರ್ಷಗಳ ಹಿಂದೆ ನಿಮಗೆ ಬೇರೆಯೇ ಕೊಟ್ಟಾಗಿದೆ, ಅಲ್ಲಿಗೆ ಹೋಗಬಹುದು: ಸುರೇಶ್ ಕುಮಾರ್ ಕೂಡೂರು


ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣೆಗೆ ಮೇಲೆ ಕಲ್ಲು ತೂರಾಟ ಮಾಡಿ ಗಲಬೆ ಸೃಷ್ಠಿಸಿದ ಘಟನೆಯನ್ನು ಖಂಡಿಸಿ ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷತ್ ವತಿಯಿಂದ ಬುಧವಾರ ಕಡಬ ಪೇಟೆಯ ಮುಖ್ಯ ರಸ್ತೆಯ ಪಂಜ ಕ್ರಾಸ್ ಬಳಿ ಪ್ರತಿಭಟನೆ ಸಲ್ಲಿಸಲಾಯಿತು.
ರಾಷ್ಟಿçಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಡಾ.ಸುರೇಶ್ ಕುಮಾರ್ ಮಾತನಾಡಿ, ಮದ್ದೂರಿನಲ್ಲಿ ಹಿಂದೂ ವಿರೋಧಿ ಮತಾಂದ ಪುಂಡರು ನಮ್ಮ ಶ್ರದ್ಧೆಯ ಗಣೇಶೋತ್ಸವ ಮೆರವಣಿಗೆಗೆ ವ್ಯವಸ್ಥಿತ ಸಂಚು ನಡೆಸಿ ಕಲ್ಲೂ ತೂರಾಟ ಮಾಡಿದ್ದಾರೆ, ನಮಗೆ ಸೌಹಾರ್ದತೆಯ ಪಾಠ ಮಡುವವರು, ಕಲ್ಲೆಸದ ಪುಂಡರ ವಿರುದ್ಧ ಧ್ವನಿ ಎತ್ತಬೇಕು, ಹಿಂದೂಗಳೊoದಿಗೆ ಸೌಹಾರ್ದತೆಯಿಂದ ಬದುಕಲು ಸಧ್ಯವಾಗಿದಿದ್ದರೆ ೭೫ ವರ್ಷಗಳ ಹಿಂದೆಯೇ ನಿಮಗೆ ಬೇರೆಯೇ ವ್ಯವಸ್ಥೆ ಮಾಡಿ ಕೊಟ್ಟಲ್ಲಿಗೆ ಹೋಗಬಹುದು ಎಂದು ಅಕ್ರೋಶ ವ್ಯಕ್ತಪಡಿಸಿದರು. ಹಿಂದೂ ಧರ್ಮ, ಸಂಸ್ಕೃತಿಯ ಮೇಲೆ ನಿರಂತರ ದಾಳಿ ನಡೆಯತ್ತಲೇ ಇದೆ, ಹಿಂದೂ ವಿರೋಧಿಗಳ ಅಟ್ಟಹಾಸ ಮಿತಿ ಮೀರುತ್ತಿದೆ, ಈಗ ಮಲಗಿದ್ದ ಹಿಂದೂಗಳನ್ನು ಬಡಿದೆಬ್ಬಿಸಲಾಗುತ್ತಿದೆ. ಮದ್ದೂರು ಘಟನೆ ಒಂದು ಉದಾಹರಣೆ ಮಾತ್ರ ದೇಶದ ಎಲ್ಲೆಡೆ ಇಂತಹ ವ್ಯವಸ್ಥಿತ ಸಂಚು ನಡೆಯುತ್ತಿದೆ. ಎಂದು ಹೇಳಿದ ಸುರೇಶ್ ಕುಮಾರ್ ಹಿಂದೂಗಳಿಗೆ ಮಾತ್ರ ಶಾಂತಿ, ತಾಳ್ಮೆಯ ಸೌಹಾರ್ದತೆಯೆ ಪಾಠ ಮಾಡಲಾಗುತ್ತಿದೆ, ಗಲಭೆ ಸೃಷ್ಠಿಸುವ ಪುಂಡರಿಗೆ ಬುದ್ದಿಹೇಳುವ, ನಿಗ್ರಹಿಸುವ ನರಶಕ್ತಿ ಈ ಸರಕಾರಕ್ಕೆ ಇಲ್ಲ. ನೀವು ನಿಜವಾದ ಸೌಹಾರ್ದ ಬಯಸುವವರಾದರೆ ನಮ್ಮೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ , ಪುಲ್ವಮಾ ದಾಳಿಯಲ್ಲಿ ಧರ್ಮ ಕೇಳಿ ಗುಂಡಿಕ್ಕಿದವರ ವಿರುದ್ಧ ಧ್ವನಿ ಎತ್ತಿ ಎಂದು ಸವಾಲು ಹಾಕಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಾಸ್ತ್ಯ ರೈ ಮಾತನಾಡಿ, ವಿಪರ‍್ಯಾಸ ಎಂದರೆ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬಂದ ಬಳಿಕ ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ, ಹಿಂದೂಗಳಿಗೆ ಬದುಕಲು ಸಾಧ್ಯವಿಲ್ಲದಂತಾಗಿದೆ. ಹಿಂದೂ ಸಮಾಜ ಯಾವತ್ತೂ ಅನ್ಯ ಧರ್ಮಿಯರ ಆಚರಣೆಯ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಮಯ್ಯನವರು ಹಿಂದೂ ಸಂಘಟನೆಗಳು ಸಮಾಜದಲ್ಲಿ ಅಶಾಂತಿ ಸೃಷ್ಠಿಸುತ್ತವೆ ಎಂದು ಆರೋಪ ಮಾಡುತ್ತಾರೆ, ಮದ್ದೂರಿನಲ್ಲಿ ನಿಮ್ಮ ಶಾಂತಿದೂತರು ಮಾಡಿದ ಕೃತ್ಯವನ್ನು ಹಿಂದೂಗಳ ಮೆಲಿನ ದಬ್ಬಾಳಿಕೆಯ ಬಗ್ಗೆ ಅವರು ಯಾಕೆ ಮಾತಾಡುತ್ತಿಲ್ಲ ಎಂದರು.
ಕಡಬ ಪ್ರಖoಡ ವಿಶ್ವಹಿಂದು ಪರಿಷತ್ ಅಧ್ಯಕ್ಷ ಕೇಪು ಶಿವರಾಮ ಶೆಟ್ಟಿ, ಹಿಂದೂ ಮುಖಂಡರಾದ ರವಿರಾಜ್ ಶೆಟ್ಟಿ ಕಡಬ, ಕಡ್ಯ ವಾಸುದೇವ ಭಟ್, ಜಯಂತ್ ಕಲ್ಲುಗುಡ್ಡೆ, ಪ್ರಮೋದ್ ರೈ ನಂದುಗುರಿ, ಪ್ರಮೀಳಾ ಲೋಕೇಶ್, ಸತ್ಯನರಾಯಣ ಹೆಗ್ಡೆ ನಡುಮಜಲು, ಸೀತಾರಾಮ ಗೌಡ ಪೊಸವಳಿಕೆ, ಎ.ಪಿ.ಗಿರೀಶ್, ದೇವಿಪ್ರಸಾದ್ ಮರ್ಧಾಳ, ಸಂತೋಷ್ ಕುಮಾರ್ ಕೋಡಿಬೈಲು, ಅಜಿತ್ ಆರ್ತಿಲ, ರಘುರಾಮ ನಾÊಕ್, ಮೋಹನ ಕೆರೆಕ್ಕೋಡಿ, ಸತೀಶ್ ಕರ್ಮೆಣ, ವಿಶ್ವನಾಥ ರೈ, ಪುರುಷೋತ್ತಮ ಕೊಂಬಾರು, ಮೋಕ್ಷಿತ್ ಕೊಂಬಾರು, ಚೇತನ್ ಬೇರಿಕೆ, ಕಾರ್ತಿಕ್ ಪಿಜಕಳ, ಕಿಶನ್ ರೈ, ಕಡಬ ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು, ಬಿಜೆಪಿ ಮುಖಂಡರು ಮತ್ತಿತರರು ಭಾಗವಹಿಸಿದ್ದರು, ಉಮೇಶ್ ಶೆಟ್ಟಿ ಸಾಯಿರಾಮ್ ಸ್ವಾಗತಿಸಿ, ನಿರೂಪಿಸಿದರು. ರಾಧಾಕೃಷ್ಣ ಕೋಲ್ಪೆ ವಂದಿಸಿದರು. ಬಳಿಕ ಕಡಬ ತಹಸೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

