



ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಇಂದು (ಸೆಪ್ಟೆಂಬರ್ 10ರಂದು) ಸಂಜೆ 4:30ಕ್ಕೆ ಸೌಜನ್ಯಾ ಮಾವ ವಿಠಲ್ ಗೌಡನನ್ನು ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿರುವ ಬಂಗ್ಲಗುಡ್ಡ ಪ್ರದೇಶಕ್ಕೆ ಕರೆದತಂದಿದ್ದಾರೆ.


ಎಸ್ಪಿ ಸಿ.ಎ.ಸೈಮನ್ ನೇತೃತ್ವದಲ್ಲಿ ಇಲ್ಲಿ ಸ್ಥಳ ಮಹಜರು ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.

