Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬ್ರಹ್ಮಾವರ ತಾಲ್ಲೂಕಿನ ಹಿಲಿಯಾಣ ಗ್ರಾಮದ ಆಮ್ರಕಲ್ಲು ಪ್ರದೇಶದಲ್ಲಿನ ಸರ್ಕಾರಿ ಹಾದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

Out Look Fashion

ಸೆಪ್ಟೆಂಬರ್ 10, 2025 ರಂದು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಶಂಕರನಾರಾಯಣ ಠಾಣಾ ಪೊಲೀಸರು, ಆರೋಪಿತ ನಾರಾಯಣ ನಾಯ್ಕ (43), ತಂದೆ ದೇವಣ್ಣ ನಾಯ್ಕ, ವಾಸ: ಆಮ್ರಕಲ್ಲು, ಹಿಲಿಯಾಣ ಗ್ರಾಮ, ಬ್ರಹ್ಮಾವರ ತಾಲ್ಲೂಕು ಇವರನ್ನು ಬಂಧಿಸಿದರು.

Jaya Refrigeration and Air Condition

ಪರವಾನಿಗೆ ಇಲ್ಲದೇ ಮಾರಾಟ ಮಾಡುತ್ತಿದ್ದ ಮೈಸೂರು ಲ್ಯಾನ್ಸರ್ ವಿಸ್ಕಿ ಬ್ರಾಂಡ್‌ನ 70 ಟೆಟ್ರಾ ಪ್ಯಾಕ್‌ಗಳನ್ನು ಹಾಗೂ ನಗದು ರೂ.430/-ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ.3,930/- ಆಗಿದೆ.

ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅ.ಕ್ರ. 82/2025, ಕಲಂ 32, 34 ಕೆ.ಇ. ಕಾಯ್ದೆ-1965ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.