Akshaya Sharadhotsava
Darbe Salon
Mahalingeshwara Car Air Condition
New Dot Dress Mart


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ನೆಟ್ಟಣ ಬಾಲಕೃಷ್ಣ ರವರಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನೀಡಿರುವ ವಾಟರ್ ಬೆಡ್ಡ್ ವಿತರಣೆ ಮಾಡಲಾಯಿತು.

Out Look Fashion
Screenshot


ಬಿಳಿನೆಲೆ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಶೆ ಚಂದ್ರಾವತಿಯವರ ಪತಿ ಬಾಲ ಕೃಷ್ಣ ರವರು ಹತ್ತಿರದ ನೆಟ್ಟಣ ಪೇಟೆಗೆ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಕಾರು ಡಿಕ್ಕಿಯಾಗಿ ಬೆನ್ನುಮೂಳೆ ಹಾಗೂ ಎರಡೂ ಕಾಲಿನ ಗಂಟು ಮುರಿತಕೊಳಗ್ಗಾಗಿ ಕುಳಿತುಕೊಳ್ಳಲೂ ಸಾಧ್ಯವಾಗದೇ ಮಲಗಿದಲ್ಲಿಯೇ ಇದ್ದು ಇವರಿಗೆ ನೀಡಿರುವ ವಾಟರ್ ಬೆಡ್ಡ್ ನ್ನು ಸ್ವಗ್ರಹದಲ್ಲಿ ನೀಡಿ ಸಾಂತ್ವಾನ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಬಿಳಿನೆಲೆ ವಲಯದ ಜನಜಾಗೃತಿ ವೇದಿಕೆ ಸದಸ್ಯರಾದ ನಿವೃತ ಶಿಕ್ಷಕರು ಗೋಪಾಲಕೃಷ್ಣ ಭಟ್ ಬಿಳಿನೆಲೆˌ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆˌ ಬಿಳಿನೆಲೆ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ಒಗ್ಗು ˌಜನಜಾಗೃತಿ ಸದಸ್ಯೆ ನಿವೃತ ಶಿಕ್ಷಕಿ ಶಾರದಾ ಟೀಚರ್ ಬಿಳಿನೆಲೆ ˌ ಸೇವಾಪ್ರತಿನಿಧಿಗಳಾದ ಸತೀಶ್ ಎˌ ಭವ್ಯಶ್ರೀ ಕೈಕಂಭ ˌತರಬೇತಿ ಮೇಲ್ವೀಚಾರಕ ಅರ್ಜುನ್ ಪಾಟೀಲ್ ಬೆಳಗಾಂ ಹಾಗೂ ಒಕ್ಕೂಟದ ಪಧಾದಿಕಾರಿ ಸ್ಮಿತಾ ಉಪಸ್ಥಿತರಿದ್ದರು.
ನಿವೃತ ಶಿಕ್ಷಕರು ಗೋಪಾಲಕೃಷ್ಣ ಭಟ್ ರವರು ಮಂಚದ ವ್ಯವಸ್ಥೆ ಇಲ್ಲದೆ ನೆಲದಲ್ಲಿಯೇ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಬಾಲಕೃಷ್ಣರವರಿಗೆ ಆರೈಕೆಗೆ ಅನುಕೂಲವಾಗುವಂತೆ ಮಂಚವನ್ನು ಖರೀದಿಸಲು ಧನಸಹಾಯ ನೀಡಿ ಸಾಂತ್ವನದ ಮಾತುಗಳನ್ನಾಡಿದರು.

Jaya Refrigeration and Air Condition