




ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬು ಕಾರ್ಲ ರಾಮಧ್ವಾರದ ಬಳಿ ಸೆ 6 ರಂದು “ಗೋ ಮಾತಾ ಸಂರಕ್ಷಣಾ ಚಳುವಳಿ ಪೆರ್ನೆ” ವತಿಯಿಂದ ಗೋ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಆರೋಪಿ ಗಣರಾಜ್ ಭಟ್ ಕೆದಿಲ ಭಾಗವಹಿಸಿ ಭಾಷಣ ಮಾಡಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗಣರಾಜ್ ಭಟ್ ಕೆದಿಲ, ಸ್ಥಳೀಯವಾಗಿ ಧಾರ್ಮಿಕ ಮತ್ತು ಸಮುದಾಯಿಕ ದ್ವೇಷ ಭಾವನೆಗಳನ್ನು ಹುಟ್ಟಿಸುವ ಹಾಗೂ ಗುಂಪು ಗುಂಪುಗಳ ಮತ್ತು ಸಮುದಾಯಗಳ ಮಧ್ಯೆ ವೈಮನಸ್ಸು ಬೆಳೆಸುವ ಉದ್ದೇಶದಿಂದ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ BNS 2023 ರ ಕಲಂ: 353 (2) ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
