




ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆಯ ಕಡಬ ತಾಲೂಕಿನ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಯ ಮಾಹಿತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ಉಧ್ಘಾಟಿಸಿದ ಶ್ರೀ ಸುಬ್ರಹ್ಮಣ್ಯ ಎಜುಕೇಶನ್ ಸೊಸೈಟಿ( ರಿ) ಕಾರ್ಯದರ್ಶಿ ಗೋಪಾಲಕೃಷ್ಣ ಪ್ರೌಡಶಾಲೆಯ ಸಂಚಾಲಕರಾದ ಕೃಷ್ಣಾಶರ್ಮಾ ಪಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಮೂಲಕ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಕ್ಕಳ ಭವಿಷ್ಯ ರೂಪಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಸ್ವಾಸ್ಥ್ಯದ ಸಂರಕ್ಷಣೆಯ ಉದ್ದೇಶದಿಂದ ದುಶ್ಚಟಗಳಿಂದ ದೂರವಾಗುವ ಪರಿ ಹೇಗೆ ಎಂಬುದನ್ನು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಪ್ರತೀ ವರ್ಷ ಪ್ರೌಢ ವ್ಯವಸ್ಥೆಯಲ್ಲಿರುವ ಮಕ್ಕಳಿಗೆ ಸೂಕ್ತ ಮಾಹಿತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸ್ವಾಸ್ಥ್ಯ ಸಂಕಲ್ಪದ ಸಂಪನ್ಮೂಲ ವ್ಯಕ್ತಿ ಸವಣೂರು ಪ್ರೌಢಶಾಲೆಯ ಶಿಕ್ಷಕರಾದ ಕಿಶಾನ್ ರವರು ಮಕ್ಕಳ ಮನಸ್ಥಿತಿ ˌಕಲಿಕೆ ಹಾಗೂ ಮುಂದಿನ ಭವಿಷ್ಯದ ಮೇಲೆ ದುಷ್ಪರಿಣಾಮ ಮಾಡುತ್ತಿರುವ ಮಾದಕ ವಸ್ತುಗಳು ಹಾಗೂ ಮದ್ಯಪಾನ ಧೂಮಪಾನ ದಂತಹ ಮಾರಕ ವಸ್ತುಗಳ ವರ್ಜನೆ ಮಾಡಿ ಸಮಾಜದ ಉತ್ತಮ ಪ್ರಜೆಯಾಗುವ ಹೆತ್ತವರ ಕನಸಿನ ಬಗ್ಗೆ ಮಾಹಿತಿ ನೀಡಿದರು ಹಾಗೂ ಶೈಕ್ಷಣಿಕ ಅವಧಿಯಲ್ಲಿ ನೈತಿಕ ಸಂಸ್ಕಾರಯುತ ಶಿಕ್ಷಣ ಪಡೆದುಕೊಳ್ಳುವುದೂ ಅತೀ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ ಶಿಕ್ಷಕರು ಜನಜಾಗೃತಿ ವೇದಿಕೆಯ ಬಿಳಿನೆಲೆ ವಲಯದ ಪದಾಧಿಕಾರಿ ಗೋಪಾಲಕೃಷ್ಣ ಭಟ್ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಒಗ್ಗುˌ, ಜನಜಾಗೃತಿ ವೇದಿಕೆ ಪಧಾದಿಕಾರಿ ನಿವೃತ ಶಿಕ್ಷಕಿ ಶಾರದಾ ಟೀಚರ್ ಬಿಳಿನೆಲೆ, ಶಾಲಾ ಮುಖ್ಶಶಿಕ್ಷಕರು ಸತ್ಶಶಂಕರ್ ಎಮ್ ರವರು ಉಪಸ್ಥಿತರಿದ್ದರು.
ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿ ವಿಜ್ಞಾನ ವಿಭಾಗದ ಶಿಕ್ಷಕ ಪ್ರದೀಪ್ ವಂದಿಸಿದರು.
ಚಿತ್ರಕಲಾವಿಭಾಗದ ಶಿಕ್ಷಕ ದಿನೇಶ್ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು.
ಸೇವಾಪ್ರತಿನಿಧಿ ಸತೀಶ್, ತರಬೇತಿ ಮೇಲ್ವೀಚಾರಕ ಅರ್ಜುನ್ ಪಾಟೀಲ್, ಕೈಕಂಬ ವಿಭಾಗದ ಸೇವಾಪ್ರತಿನಿಧಿ ಭವ್ಯಶ್ರೀ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.


