




ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ ನರಿಮೊಗರು ಪುತ್ತೂರು ಇದರ ಆಶ್ರಯದಲ್ಲಿ 2025-26 ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ ಹಾಗೂ ಬಾಲಕಿಯರ ಯೋಗಾಸನ ಸ್ಪರ್ಧೆ ಸಾಂದೀಪನಿ ಶಾಲೆಯ ಶ್ರೀ ಗೋಪಾಲಕೃಷ್ಣ ವೇದಿಕೆ ಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ,
ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಲೋಕೇಶ್ ಎಸ್ ಆರ್ ಹಾಗೂ ಕ್ಷೇತ್ರ ಶಿಕ್ಷಣ ಸಂಯೋಜಕರಾದ ಶ್ರೀ ಹರಿಪ್ರಸಾದ್, ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕಿ ಶ್ರೀಮತಿ ತನುಜಾ, ನರಿಮೊಗರು ಕ್ಲಸ್ಟರ್ ವಲಯದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪರಮೇಶ್ವರಿ,
ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್, ಅಕ್ಷರ ದಾಸೋಹ ಸಹನಿರ್ದೇಶಕರಾದ
ಶ್ರೀ ವಿಷ್ಣು ಪ್ರಸಾದ್, ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಚಕ್ರಪಾಣಿ,
ಸವಣೂರು ಸಿ ಆರ್ ಪಿ ಶ್ರೀ ಜಯಂತ್, ನೋಡಲ್ ಅಧಿಕಾರಿ ಪ್ರೌಢ ವಿಭಾಗ ಕುಂಬ್ರ ಇಲ್ಲಿಯ
ಶ್ರೀ ಕೃಷ್ಣ ಪ್ರಸಾದ್, ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ಹರೀಶ್ ಪುತ್ತೂರಾಯ
ಆಡಳಿತ ಮಂಡಳಿ ಸದಸ್ಯರಾದ ಶ್ರೀ ಸುಬ್ರಾಯ ಶೆಟ್ಟಿ ಹಾಗೂ ಯೋಗ ಪರಿಣಿತರು, ತೀರ್ಪುಗಾರರು, ತರಬೇತುದಾರರು, ತಂಡದ ವ್ಯವಸ್ಥಾಪಕರು, ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂದೀಪನಿ ಶಾಲಾ ಯೋಗ ಶಿಕ್ಷಕರಾದ ಹಾಗೂ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರು ದಕ್ಷಿಣ ಕನ್ನಡ ಇದರ ಶ್ರೀ ನವೀನ್ ರವರು ಆಸನಗಳ ಬಗ್ಗೆ ಹಾಗೂ ಪಾಲಿಸ ಬೇಕಾದ ಸ್ಪರ್ಧೆಗಳ ನಿಯಮಗಳ ಬಗ್ಗೆ ವಿವರಿಸಿದರು.
ದೀಪ ಬೆಳಗಿಸಿ ಮಾತನಾಡಿದ ಅಕ್ಷರ ದಾಸೋಹ ಸಹನಿರ್ದೇಶಕರಾದ ಶ್ರೀ ವಿಷ್ಣು ಪ್ರಸಾದ್
ಮನುಷ್ಯನಿಗೆ ಪ್ರತಿ ದಿನ ಅನ್ನ, ನೀರು ಹೇಗೆ ಮುಖ್ಯವೋ ಅದೇರೀತಿ ಯೋಗವೂ ಮುಖ್ಯ.
ಸ್ಪರ್ಧೆಯಲ್ಲಿ ನಾನೇ ಗೆಲ್ಲಬೇಕೆಂಬ ಭಾವನೆಯನ್ನು ಬಿಟ್ಟು ಗೆದ್ದವರಿಗೆ ಪ್ರೋತ್ಸಾಹಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದು ಶುಭ ಹಾರೈಸಿದರು.
ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿಯವರು ಮಾತನಾಡಿ ವಲಯ ಮಟ್ಟದಿಂದ ತಾಲೂಕುಮಟ್ಟದಲ್ಲಿ ಯೋಗ ಸ್ಪರ್ಧೆಯನ್ನು ನಡೆಸುವಾಗ ಹಲವು ಶಾಲೆಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಾಂದೀಪನಿ ವಿದ್ಯಾಸಂಸ್ಥೆಯು ಎಲ್ಲಾ ಸೌಲಭ್ಯ ಗಳನ್ನು ಒದಗಿಸಿ ಒಪ್ಪಿ ಕೊಂಡದ್ದು ತುಂಬಾ ಖುಷಿ ತಂದಿದೆ
ತೀರ್ಪುಗಾರರು ಉತ್ತಮ ಆಯ್ಕೆಯನ್ನು ಮಾಡಲಿ
ಎಲ್ಲಾ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ
ಮಿಂಚುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಅಧ್ಯಕ್ಷರು ಮಾತನಾಡುತ್ತಾ ಯೋಗ ಎಂಬುದು ಶರೀರ, ಮನಸ್ಸು, ಆಯುಶ್ಯಗಳನ್ನು ಸಮತೋಲನದಲ್ಲಿ ಇಡುವ ವಿಧಾನ. ಶರೀರದ ಚಲನೆಯನ್ನು, ಬುದ್ದಿಯನ್ನು ಸ್ಥಿರತೆಯಲ್ಲಿ ಇಡಲು ಸಹಕಾರಿಯಾಗಿದೆ ಯೋಗ. ನಮ್ಮ ಶಾಲೆಯಲ್ಲಿ ಯೋಗ ಶಿಕ್ಷಣವನ್ನು ಕಲಿಯುವ ಅವಕಾಶವಿದ್ದು ಇದು ಒಳ್ಳೆಯ ಸ್ಪರ್ಧೆಯಾಗಲಿ ಸುಸೂತ್ರವಾಗಿ ನಡೆಯಲಿ ಎಂದು ಆಶೀರ್ವದಿಸಿದರು.
ಶಾಲಾ ಮುಖ್ಯ ಗುರುಗಳಾದ ಪ್ರಸನ್ನ ಕೆ ಸ್ವಾಗತಿಸಿದರು.
ಪ್ರಾರ್ಥನೆ ಸಾಯಿ ಸಂಚಿತ್ ಮತ್ತು ಪ್ರಥಮ್ ಕಾಯರ್ಗ ಹಾಗೂ ಕಾರ್ಯಕ್ರಮದ ನಿರೂಪಣೆ ಶ್ರೀಮತಿ ನೀತು ನಾಯಕ್ ಮತ್ತು ಧನ್ಯವಾದ ಶ್ರೀಮತಿ ಉಷಾ ನೆರವೇರಿಸಿದರು.
ನಂತರ ವಿವಿಧ ಯೋಗ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
