



ಉಳ್ಳಾಲ: ಬಾಡಿಗೆ ಮನೆಯೊಂದರಲ್ಲಿ ಅಕ್ರಮ ಮದ್ಯ ತಯಾರಿಕೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಪ್ರಣವ್ ಪಿ. ಶೆಣೈ (24) ಹಾಗೂ ಅನೂಷ್ ಆರ್. (24) ಬಂಧಿತ ಆರೋಪಿಗಳು.


ಆಗಸ್ಟ್ 31ರಂದು ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಕಂಬಳಪದವು ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಮದ್ಯ ತಯಾರಿಕೆ ನಡೆಸುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ಇದರನ್ವಯ ಕೊಣಾಜೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಪ್ರಣವ್ ಪಿ. ಶೆಣೈ ಹಾಗೂ ಅನೂಷ್ ಆರ್. ಎಂಬವರು ಅಕ್ರಮ ಮದ್ಯ ತಯಾರಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಪಂಚರ ಸಮ್ಮುಖ ಪರಿಶೀಲನೆಯಲ್ಲಿ, ಸುಮಾರು 1,15,110ರೂ. ಮೌಲ್ಯದ ಅಕ್ರಮ ಮದ್ಯ, ತಯಾರಿಕಾ ಯಂತ್ರೋಪಕರಣಗಳು, ಮದ್ಯದ ಬಾಟಲಿಗಳು ಹಾಗೂ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಪರವಾನಗಿ ಇರುವ Mansion House ಬಾಟ್ಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 104/2025, ಕಲಂ 123 r/w 3(5) BNS 2023 ಹಾಗೂ ಕಲಂ 13, 32, 34 KE Act ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
