Akshaya Sharadhotsava
Darbe Salon
Mahalingeshwara Car Air Condition
New Dot Dress Mart

ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರು ‘ಮೇಕ್​ ಅಮೆರಿಕ ಗ್ರೇಟ್​ ಅಗೇನ್​’ ಎಂಬ ಘೋಷಣೆಯನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳ ಮೇಲೆ ಸುಂಕ ಸಮರ ಸಾರಿದ್ದ ಟ್ರಂಪ್​ ಇದೀಗ, ಭಾರತದ ಕಡೆ ತಮ್ಮ ವಕ್ರದೃಷ್ಟಿಯನ್ನು ಬೀರಿದ್ದಾರೆ.

Out Look Fashion

ಭಾರತ, ಚೀನಾದಂತಹ ದೇಶಗಳಿಂದ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಡಿ. ಅಮೆರಿಕನ್ನರಿಗೆ ಮೊದಲ ಆದ್ಯತೆ ನೀಡಿ ಎಂದು ಗೂಗಲ್​, ಮೈಕ್ರೋಸಾಫ್ಟ್​​​ನಂತಹ ದೈತ್ಯ ಕಂಪನಿಗಳಿಗೆ ಕರೆ ನೀಡಿದ್ದಾರೆ.

Jaya Refrigeration and Air Condition

ಅಮೆರಿಕ ಮೊದಲಾಗಿರಲಿ: ಅಮೆರಿಕದ ಕಂಪನಿಗಳು ಭಾರತ, ಚೀನಾ ಸೇರಿ ಇತರ ದೇಶಗಳಲ್ಲಿ ಕಂಪನಿಗಳನ್ನು ಆರಂಭಿಸುವುದು, ಅಲ್ಲಿನ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುವ ಮೂಲಕ ತಾಯ್ನಾಡಿನ ಜನರಿಗೆ ಮೋಸ ಮಾಡುತ್ತಿದ್ದೀರಿ. ನಿಮ್ಮ ಆಯ್ಕೆ ಮತ್ತು ಆದ್ಯತೆ ಅಮೆರಿಕ ಮೊದಲಾಗಿರಬೇಕು ಎಂದು ತಾಕೀತು ಮಾಡಿದ್ದಾರೆ.

ವಾಷಿಂಗ್ಟನ್​​ನಲ್ಲಿ ನಡೆದ ಎಐ ಟೆಕ್​ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಟ್ರಂಪ್​, ಕಂಪನಿಗಳ ಜಾಗತಿಕವಾದವು ಅಮೆರಿಕನ್ನರನ್ನು ದುರ್ಬಲಗೊಳಿಸುತ್ತಿದೆ. ಇಲ್ಲಿನ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಾಕಷ್ಟು ಲಾಭ ಗಳಿಸಿದ್ದೀರಿ. ಆದರೆ, ಅದನ್ನು ಇಲ್ಲಿಯ ಜನರ ಮೇಲೆ ಹೂಡಿಕೆ ಮಾಡುವ ಬದಲು, ಹೊರ ದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಬದ್ಧರಾಗಿರಿ: ನಿಮ್ಮ ಲಾಭಕ್ಕಾಗಿ ದೇಶವನ್ನು ಬಳಸಿಕೊಳ್ಳುತ್ತೀರಿ. ಚೀನಾದಲ್ಲಿ ನಿಮ್ಮ ಕಂಪನಿಯ ಘಟಕಗಳನ್ನು ಆರಂಭಿಸುತ್ತೀರಿ. ಭಾರತದಲ್ಲಿನ ಪ್ರತಿಭಾನ್ವಿತರನ್ನು ಉದ್ಯೋಗಿಗಳಾಗಿ ನೇಮಕ ಮಾಡಿಕೊಳ್ಳುತ್ತೀರಿ. ಬಂದ ಲಾಭದ ಹಣವನ್ನು ಐರ್ಲೆಂಡ್​​ನಲ್ಲಿ ಬಚ್ಚಿಡುತ್ತೀರಿ ಎಂದು ಛೇಡಿಸಿದ್ದಾರೆ.