




ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಪುತ್ತೂರು ವಲಯ ಇದರ ವಾರ್ಷಿಕ ಮಹಾಸಭೆ ಪುತ್ತೂರು ರೋಟರಿ ಮನೀಷಾ ಸಭಾಂಗಣ ಇಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಇವರು ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಘು ಶೆಟ್ಟಿ ವಹಿಸಿದ್ದರು, ವಿಷನ್ ಐ ಕೇರ್ ಒಫ್ಟಿಕಲ್ಸ್ ಕಣ್ಣಿನ ಪರೀಕ್ಷಾ ಕೇಂದ್ರ ವತಿಯಿಂದ ಉಚಿತ ಕಣ್ಣಿನ ತಪಾಸಣೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕರುಣಾಕರ ಕಾನಂಗಿ,ದಯಾನಂದ ಬಂಟ್ವಾಳ, ರಮೇಶ್ ಕಲಾಶ್ರೀ, ನವೀನ್ ರೈ ಪಂಜಳ, ಸುದರ್ಶನ್ ರಾವ್, ಸುಧಾಕರ ಶೆಟ್ಟಿ ಮಿತ್ತೂರ್, ಹರೀಶ್ ಎಲಿಯ, ಮತ್ತು ಪುತ್ತೂರು ಫೋಟೋಗ್ರಾಫರ್ಸ್ ಅಸೋಶಿಷನ್ ಇದರ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
