




ಆಟಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಂಡ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ (ರಿ.), ಪುತ್ತೂರು ಪುತ್ತೂರು, ಜುಲೈ 20 — ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ (ರಿ.) ಪುತ್ತೂರು, ಮಾದರಿ ಗ್ರಾಮ ಸಮಿತಿ ಬಲ್ನಾಡು ಇದರ ಆಶ್ರಯದಲ್ಲಿ ವಿಜೃಂಭಣೆಯಿಂದ ಆಟಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ನಡೆಯಿತು.


ಈ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ಮಕ್ಕಳ ವಿದ್ಯಾ ಸಾಧನೆಗೆ ಮನ್ನಣೆ ನೀಡಿ ಪ್ರತಿಭಾ ಪುರಸ್ಕಾರ ನೀಡಲಾಯಿತು.


ಸ್ಥಳೀಯ ಪೂರಕವಾದ ಸೇವೆಗಾಗಿ ಸಮುದಾಯದವರಾದ *ಸತೀಶ್ ಗೌಡ ಒಳಗುಡ್ಡೆ, ಸೀತಾರಾಮ ಗೌಡ ಕಾಂತಿಲ ತೀರ್ಥ ಪ್ರಸಾದ್ ಕಾಂತಿಲ ಅಚ್ಚುತ ಗೌಡ ಕೋಡಿಯಡ್ಕ ಲೋಕೇಶ್ ಗೌಡ ಪಟ್ಟೆ ಇವರಿಗೆ ಗಣ್ಯ ಅಥಿತಿಗಳಿಂದ ಸನ್ಮಾನ ನೀಡಿ ಗೌರವಿಸಲಾಯಿತು.

1ನೇ ತರಗತಿಯಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸ್ವ ಸಹಾಯ ಟ್ರಸ್ಟ್ (ರಿ) ಅಧ್ಯಕ್ಷರಾದ ಡಿ.ವಿ ಮನೋಹರ್ ಗೌಡ, ರವಿ ಮುಂಗ್ಲಿಮನೆ, ಚಿದಾನಂದ ಬೈಲಾಡಿ, ಶ್ರೀಮತಿ ವಾರಿಜ ಬೆಳಿಯಪ್ಪ ಗೌಡ, ಗೋಪಾಲಕೃಷ್ಣ ಪಟೇಲ್ ಚಾರ್ವಕ, ಶ್ರೀಮತಿ ಗೀತಾ ಒಳಗುಡ್ಡೆ, ಶ್ರೀ ನಾರಾಯಣ ಗೌಡ ಕುಕ್ಕುತ್ತಡಿ, ಮಾಧವ ಗೌಡ ಕಾಂತಿಲ, ಚಂದ್ರಾವತಿ ಮುದಲಾಜೆ, ಸಂತೋಷ್ ಒಳಗುಡ್ಡೆ, ಪೂರ್ಣಿಮಾ ಚೆನ್ನಪ್ಪಗೌಡ ಮುತ್ತಪ್ಪ ಗೌಡ ಕಾಂತಿಲ, ಅಚ್ಚುತ ಕಲ್ಲಾಜೆ, ಮತ್ತು ಗೌಡ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಗೆ ರುಚಿಕರವಾದ ಆಟಿ ಊಟದಿಂದ ಸಮಾರಂಭ ಕೊನೆಗೊಂಡಿತು.

