



ಅಹದಾಬಾದ್ ವಿಮಾನ ದುರಂತ ಘಟನೆಯ ಮಾಸುವ ಮುನ್ನವೆ ಲಂಡನ್‌ನಲ್ಲಿ ಇನ್ನೊಂದು ಮಿನಿ ವಿಮಾನ (ಬ್ಯುಸಿನೆಸ್ ವಿಮಾನ) ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಅಪಘಾತವಾಗಿರುವ ಸುದ್ದಿ ವರದಿಯಾಗಿದೆ.


ಜುಲೈ 13ರಂದು ಲಂಡನ್ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಸುಮಾರು 4 ಗಂಟೆಗೆ ಒಂದು ಸಣ್ಣ ವಿಮಾನವು ಟೇಕ್‌ಆಫ್ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ. ಈ ಸಮಯದಲ್ಲಿ ಭಾರೀಬೆಂಕಿಯ ಜ್ವಾಲೆ ಆವರಿಸಿಕೊಂಡುಸ್ಫೋಟಗೊಂಡಿರುವ ಘಟನೆ ನಡೆದಿದೆ. ಈ ಘಟನೆಯ ಬಳಿಕ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಎಸೆಕ್ಸ್ ಪೊಲೀಸ್ ಪಡೆಯು ಈ ಘಟನೆಯನ್ನು “ಗಂಭೀರ ಘಟನೆ” ಎಂದು ಪರಿಗಣಿಸಿ, ತುರ್ತು ಸೇವೆಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿನೀಡಿದೆ. ವರದಿಯಾದ ಮಾಹಿತಿಯ ಪ್ರಕಾರ, ಈ ವಿಮಾನವು ಬೀಚ್ B200 ಸೂಪರ್ ಕಿಂಗ್ ಏರ್ ಆಗಿರಬಹುದು ಎಂದು ಊಹಿಸಲಾಗಿದೆ. ಇದು ಸೌತೆಂಡ್‌ನಿಂದ ನೆದರ್‌ಲ್ಯಾಂಡ್‌ನ ಲೆಲಿಸ್ಟಾಡ್‌ಗೆಹೊರಟಿತ್ತು. ಆದರೆ, ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
