




ಪುತ್ತೂರು ಸ್ವಾಭಿಮಾನದ ನೆಲ, ಹಿಂದುತ್ವದ ನೆಲ, ಇಲ್ಲಿ ಯಾರೂ ಗುಲಾಮರಲ್ಲ ಎಂಬುದನ್ನು ಶಾಸಕರು ಮೊದಲು ಅರ್ಥ ಮಾಡಿಕೊಳ್ಳಲಿ.

ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರ ಬೆವರಿನ ಮೇಲೆ ಪಕ್ಷ ಕಟ್ಟಲಾಗಿದೆ. ಅಂತಹ ಕಾರ್ಯಕರ್ತರ ಅಧ್ಯಕ್ಷರನ್ನು ಏಕವಚನದಲ್ಲಿ ಕರೆಯುವುದು ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ, ಇದು ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರ ಭಾವನೆಗೆ ಮಾಡಿದ ಅವಮಾನ. ಪುತ್ತೂರಿನ ಶಾಸಕರಾಗಿ ಘನತೆಗೆ ತಕ್ಕಂತೆ ಮಾತನಾಡಬೇಕು, ಬಾಯಿಗೆ ಬಂದಂತೆ ಮಾತನಾಡಿ ಊರಿನ ಮಾನ ಹರಾಜು ಹಾಕಬಾರದು.

ಅಭಿವೃದ್ಧಿ ಎಲ್ಲಿ ಇದೆ? ನಿಮ್ಮ ರೀಲ್ಸ್ ಮತ್ತು ಫ್ಲೆಕ್ಸ್ನಲ್ಲಿ ಮಾತ್ರ. ಹಳ್ಳಿಯ ರಸ್ತೆ ನೋಡಿದರೆ ರಸ್ತೆ ಇಲ್ಲ, ಗುಂಡಿಯೇ ರಸ್ತೆ ಆಗಿದೆ. ಕೇಂದ್ರದ ಯೋಜನೆಗೆ ಫ್ಲೆಕ್ಸ್ ಹಾಕುವ ನೀವು, ಅದೇ ಕೇಂದ್ರದ ಪಕ್ಷದ ಜಿಲ್ಲಾಧ್ಯಕ್ಷರನ್ನು ತುಚ್ಛವಾಗಿ ಮಾತನಾಡುತ್ತೀರಿ. ರಾಜ್ಯದ ಅನುದಾನದಲ್ಲಿ ಫ್ಲೆಕ್ಸ್ ಮಾತ್ರ ಇದೆ, ಕೆಲಸ ಎಲ್ಲಿ?
ಇನ್ನೊಬ್ಬರನ್ನು ತುಚ್ಛವಾಗಿ ಮಾತನಾಡುವುದನ್ನು ಬಿಟ್ಟು ಕ್ಯಾಮೆರಾ ಹಿಂದೆ ಜನರ ಕಷ್ಟ ಕೇಳಿ ಎಂದು ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಹ ಸಂಚಾಲಕ ಪ್ರಸನ್ನ ದರ್ಬೆ ಹೇಳಿದರು.
