Akshaya Sharadhotsava
Darbe Salon
Mahalingeshwara Car Air Condition
New Dot Dress Mart

ವಾಷಿಂಗ್ಟನ್‌/ ಟೆಹರಾನ್‌: ಹಾರ್ಮುಜ್ ಜಲಸಂಧಿಯ (Strait of Hormuz) ನಿಯಂತ್ರಣದ ವಿಚಾರವಾಗಿ ಅಮೆರಿಕ (USA) ಹಾಗೂ ಇರಾನ್ (Iran) ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಭಾನುವಾರ ಸಂಜೆಯಿಂದ ಇರಾನ್, ಕುವೈತ್ಮ ಬಹರೇನ್‌ ಮೇಲೆ ಮತ್ತೆ ಹೊಸ ದಾಳಿಗಳು ನಡೆದಿವೆ. ಈ ಪ್ರಮುಖ ಜಲಮಾರ್ಗ ಸಂಚಾರಕ್ಕೆ ಮುಕ್ತವಾಗಿದೆಯೇ ಇಲ್ಲವೇ ಎಂಬ ಬಗ್ಗೆ ವಾಷಿಂಗ್ಟನ್ ಮತ್ತು ಟೆಹ್ರಾನ್ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡಿವೆ.

Out Look Fashion

ತನ್ನ ದಕ್ಷಿಣ ಭಾಗದ ಎರಡು ದ್ವೀಪಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ತಿಳಿಸಿದೆ. ಇತ್ತ ಇರಾನ್‌ನಿಂದ ಪದೇ ಪದೇ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗೊಳಗಾಗುತ್ತಿರುವ ಕುವೈತ್, ತನ್ನ ಗಡಿ ಠಾಣೆಗಳು ಮತ್ತು ಕಡಲಾಚೆಯ ತೈಲ ಸಂಸ್ಕರಣಾ ಕೇಂದ್ರದ (Offshore oil platform) ಮೇಲೆ ದಾಳಿ ನಡೆದಿದೆ ಎಂದು ಹೇಳಿದೆ.

Jaya Refrigeration and Air Condition

ಭಾನುವಾರ ಬೆಳಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಾಣಿಜ್ಯ ಹಡಗೊಂದರ ಮೇಲೆ ದಾಳಿ ನಡೆಸಿತ್ತು. ದಾಳಿಯ ಬೆನ್ನಲ್ಲೇ ಹಡಗು ಹೊತ್ತಿ ಉರಿದಿದ್ದರಿಂದ ಅದರ ಸಿಬ್ಬಂದಿ ಹಡಗನ್ನು ಬಿಟ್ಟು ಹೊರಬರಬೇಕಾಯಿತು.

ಈ ಘಟನೆಯ ನಂತರ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC)ಈ ವಲಯದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಂದಿನ ಸೂಚನೆವರೆಗೆ ಮುಚ್ಚಲಾಗುತ್ತದೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಇರ್ನಾ (IRNA) ಮೂಲಕ ಪ್ರಕಟಿಸಿದೆ.