



ಪ್ಯಾರಿಸ್: ಇತ್ತೀಚೆಗಷ್ಟೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಪ್ರಧಾನಿ ಮೋದಿ ‘ಮೆಲೋಡಿʼ ಚಾಕೊಲೇಟ್ (Melody Chocolate) ಗಿಫ್ಟ್ ಕೊಟ್ಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಜಾಗತಿಕ ನಾಯಕರು ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.


ಫ್ರಾನ್ಸ್‌ನ ಏವಿಯನ್-ಲೆ-ಬೈನ್ಸ್‌ನಲ್ಲಿ (France’s Evian-les-Bains) ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಮೆಲೋನಿ ಅವರು ʻನಾವು ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್ ಕಪಲ್ʼ ಅಂತ ಹೇಳಿದ್ದಾರೆ. ಅದಕ್ಕೆ ಮೋದಿ ನಗುತ್ತಾ ಪ್ರತಿಕ್ರಿಯಿಸಿರುವ ವಿಡಿಯೋ ʻಮೆಲೋಡಿ ಬಝ್ʼ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅಮೆರಿಕ – ಇರಾನ್ ನಡುವಿನ ಮಹತ್ವದ ಒಪ್ಪಂದ ಸ್ವಾಗತಿಸಲು ಫ್ರಾನ್ಸ್‌ನ ಎವಿಯನ್-ಲೆಸ್-ಬೇನ್ಸ್‌ನಲ್ಲಿ 7 ರಾಷ್ಟ್ರಗಳ ಒಕ್ಕೂಟ (ಜಿ7) ನಾಯಕರು ಒಂದೆಡೆ ಸೇರಿದ್ದಾರೆ. ಈ ಮಧ್ಯೆ ಮೆಲೋನಿ – ಮೋದಿ (Narendra Modi) ನಡುವಿನ ಸಂಕ್ಷಿಪ್ತ ಮಾತುಕತೆ ಸಖತ್ ವೈರಲ್ ಆಗಿದೆ.

