Tamanvi Silk
Darbe Salon
Mahalingeshwara Car Air Condition

ಬೆಳ್ತಂಗಡಿ, ಜೂನ್ 5: ಕುದುರೆಮುಖದ ಬಂಡಾಜೆ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಲಘು ಪ್ರಮಾಣದ ಗುಡ್ಡಜರಿತ ಸಂಭವಿಸಿದ್ದು, ಕಲ್ಲು ಹಾಗೂ ಮಣ್ಣು ಜರಿದಿರುವ ಘಟನೆ ಗಮನಕ್ಕೆ ಬಂದಿದೆ.

Out Look Fashion

ಗುಡ್ಡಜರಿತ ಸಂಭವಿಸಿದ ಸ್ಥಳವನ್ನು ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಗ್ರಾಮಸ್ಥರು ಗಮನಿಸಿ ಮಾಹಿತಿ ನೀಡಿದ್ದಾರೆ. ಆದರೆ ಗುಡ್ಡಜರಿತ ಉಂಟಾದ ಪ್ರದೇಶದಲ್ಲಿ ಯಾವುದೇ ಮನೆಗಳು ಅಥವಾ ಮಾನವ ವಸತಿ ಪ್ರದೇಶಗಳಿಲ್ಲದ ಕಾರಣ ಜೀವಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.ಬಂಡಾಜೆ ಅರಣ್ಯ ಪ್ರದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ಇಂತಹ ಸಣ್ಣ ಪ್ರಮಾಣದ ಗುಡ್ಡಜರಿತಗಳು ಸಾಮಾನ್ಯವಾಗಿದ್ದು, ಜನರು ಅನಗತ್ಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.

Jaya Refrigeration and Air Condition

ಪರಿಸ್ಥಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಗಮನಿಸುತ್ತಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.