



ತಿರುವನಂತಪುರಂ: ಪ್ರಯಾಗರಾಜ್ ಕುಂಭಮೇಳದ ಸಮಯದಲ್ಲಿ ಜನಪ್ರಿಯತೆ ಗಳಿಸಿದ್ದ ಯುವತಿ ಮೊನಾಲಿಸಾ ಭೋಸ್ಲೆ ಸಲ್ಲಿಸಿದ ಜನನ ಪ್ರಮಾಣಪತ್ರವನ್ನ ಬುಧವಾರ (ಇಂದು) ಕೇರಳ ಹೈಕೋರ್ಟ್ ಪರಿಗಣಿಸಿದೆ. ಜೊತೆಗೆ ಪ್ರಾಥಮಿಕವಾಗಿ ಆಕೆ ಪ್ರಬುದ್ಧಳಾಗಿದ್ದಾಳೆ ಎಂದು ಕೋರ್ಟ್ ಹೇಳಿದೆ.

ಮಧ್ಯಪ್ರದೇಶ ಪೊಲೀಸರು ದಾಖಲಿಸಿರುವ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಭೋಸ್ಲೆ ಮತ್ತು ಪತಿ ಮೊಹಮ್ಮದ್ ಫರ್ಮಾನ್ (Mohd Farman) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಅವರ ತಂದೆ ತಮ್ಮ ಮದುವೆಯ ಸಮಯದಲ್ಲಿ ತಾನು ಅಪ್ರಾಪ್ತಳಾಗಿದ್ದೆ ಎಂದು ಹೇಳಿಕೊಂಡಿದ್ದರು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮೊಹಮ್ಮದ್ ಫರ್ಮಾನ್‌ಗೆ 1 ತಿಂಗಳ ಟ್ರಾನ್ಸಿಟ್ ಬೇಲ್ ಮಂಜೂರು ಮಾಡಿದೆ.

