Tamanvi Silk
Darbe Salon
Mahalingeshwara Car Air Condition

ಬೆಂಗಳೂರು: ಕೇರಳಕ್ಕೆ (Kerala) ಇಂದು (ಜೂ.4) ಮುಂಗಾರು (Southwest Monsoon)ಪ್ರವೇಶಿಸಿದೆ. ವಾಡಿಕೆಗಿಂತ ಮೂರು ದಿನ ತಡವಾಗಿ ಮುಂಗಾರು ಶುರುವಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಇನ್ನೆರೆಡು ದಿನದಲ್ಲಿ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Out Look Fashion

ಕರ್ನಾಟಕದಲ್ಲಿ ಮುಂಗಾರು ಅಧಿಕೃತವಾಗಿ ಯಾವ ದಿನ ಪ್ರವೇಶಿಸಲಿದೆ ಎಂಬುದನ್ನು ಗುರುವಾರ ಮುಂಗಾರು ಗಾಳಿಯಯನ್ನು ಪರಿಶೀಲಿಸಿದ ಬಳಿಕ ಘೋಷಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಇದರ ನಡುವೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಮುಂದಿನ ಐದು ದಿನಗಳ ಕಾಲ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

Jaya Refrigeration and Air Condition

ಗುಡುಗು, ಮಿಂಚು, ಬಿರುಗಾಳಿ ಹಾಗೂ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಎಚ್ಚರಿಕೆ ನೀಡಿದೆ.