Tamanvi Silk
Darbe Salon
Mahalingeshwara Car Air Condition

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆರ್‌ಸಿಬಿ (RCB) ವಿಜಯೋತ್ಸವದ ಸಂಭ್ರಮಾಚರಣೆ ಜೋರಾಗಿದೆ. ಇದೇ ವೇಳೆ ಸಂಚಾರಿ ಪೊಲೀಸರು 260 ಡ್ರಿಂಕ್ & ಡ್ರೈವ್‌ ಕೇಸ್ (Drink and Drive Case) ದಾಖಲಿಸಿದ್ದಾರೆ.

Out Look Fashion

ಭಾನುವಾರ (ಮೇ 31) ನಡೆದ ಐಪಿಎಲ್ 2026ರ (IPL 2026) ಫಿನಾಲೆಯಲ್ಲಿ ಗೆದ್ದು ಆರ್‌ಸಿಬಿ (RCB) ತಂಡ ಸತತ ಎರಡನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂಭ್ರಮಾಚರಣೆ ಜೋರಾಗಿದೆ. ಇದೇ ಸಂದರ್ಭದಲ್ಲಿ ಬೇಟೆಗಿಳಿದ ಸಂಚಾರಿ ಪೊಲೀಸರು ನಿನ್ನೆ ಒಂದೇ ರಾತ್ರಿಯಲ್ಲಿ 260 ಡ್ರಿಂಕ್ & ಡ್ರೆöÊವ್ ಕೇಸ್ ದಾಖಲಿಸಿಕೊಂಡಿದ್ದಾರೆ.

Jaya Refrigeration and Air Condition

ಅಭಿಮಾನಿಗಳು ಬೈಕ್ ರ‍್ಯಾಲಿ, ಆರ್‌ಸಿಬಿ ಪರ ಜಯಘೋಷಗಳನ್ನು ಕೂಗಿ ಹಾಗೂ ಹಲವೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಸಂಚಾರಿ ಪೊಲೀಸರು ಫೈನಲ್ ಹಿನ್ನೆಲೆ ನಗರದ ಪ್ರಮುಖ ಫ್ಲೈಓವರ್‌ಗಳನ್ನು ರಾತ್ರಿ 11ಗಂಟೆಯಿಂದ ಮುಂಜಾನೆ 5 ಗಂಟೆ ತನಕ ಬಂದ್ ಮಾಡುವಂತೆ ಸೂಚನೆ ಹೊರಡಿಸಿದ್ದರು.