Tamanvi Silk
Darbe Salon
Mahalingeshwara Car Air Condition

ಮುಂಬೈ: ಪೆಟ್ರೋಲ್‌, ಡೀಸೆಲ್‌ (Petrol, Diesel) ಬಳಿಕ ಇದೀಗ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ದರ (CNG Rate) ಮತ್ತೆ ಪ್ರತಿ ಕೆಜಿಗೆ 2 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್ ಲಿಮಿಟೆಡ್ (MGL) ಸಂಸ್ಥೆಯು ಮುಂಬೈನಲ್ಲಿ ಇಂದಿನ ಅನ್ವಯವಾಗುವಂತೆ ಹೊಸ ದರ ಘೋಷಿಸಿದೆ.

Out Look Fashion

ಪರಿಷ್ಕೃತ ದರದಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದ್ದು, 86 ರೂ.ಗಳಿಗೆ ಏರಿಕೆಯಾಗಿದೆ. ಇನ್ನೂ ಗೃಹ ಬಳಕೆಯ ಪಿಎನ್‌ಜಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (SCM) 50 ಪೈಸೆ ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ.

Jaya Refrigeration and Air Condition

ತಿಂಗಳಲ್ಲಿ 2ನೇ ಬಾರಿಗೆ ದರ ಏರಿಕೆ
ಕಳೆದ ಕೆಲ ದಿನಗಳಲ್ಲಿ ಮುಂಬೈನಲ್ಲಿ (Mumbai) ಮಾತ್ರವೇ 2ನೇ ಬಾರಿಗೆ ಮಾಡಿದ ದರ ಏರಿಕೆ ಇದಾಗಿದೆ. ಮೇ 26 ರಂದು ದೆಹಲಿಯಲ್ಲೂ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ. ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮುನ್ನ ಮುಂಬೈ ವ್ಯಾಪ್ತಿಯಲ್ಲಿ ಮೇ 14 ರಂದು 2 ರೂ. ಹೆಚ್ಚಳ ಮಾಡಲಾಗಿತ್ತು.