Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಲಕ್ನೋ: ರೈಲು ಬೋಗಿಯೊಂದನ್ನು (Train Coach) ಸ್ವಚ್ಛಗೊಳಿಸಲು ಹೋದ ಸಿಬ್ಬಂದಿ ಶಿರಚ್ಛೇದಿತ ದೇಹ ಪತ್ತೆ, ಮುಂಡ ಕತ್ತರಿಸಿದ ರುಂಡವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಛಪ್ರಾದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ಗೋಮ್ತಿನಗರ ಎಕ್ಸ್‌ಪ್ರೆಸ್‌ ರೈಲಿನ (Gomtinagar Express Train) ಬೋಗಿಯೊಂದರಲ್ಲಿ ಈ ಘಟನೆ ನಡೆದಿದೆ.

Out Look Fashion

ರೈಲಿನ ಸ್ವಚ್ಛತಾ ಸಿಬ್ಬಂದಿ ಎಸಿ ಸ್ಲೀಪರ್ ಕೋಚ್ ಬೋಗಿಯನ್ನು ಸ್ವಚ್ಛಗೊಳಿಸುತ್ತಿರುವಾಗ ಅನುಮಾಸ್ಪದವಾಗಿ ಚೀಲ ಮತ್ತು ಒಂದು ಬಾಕ್ಸ್ ಕಂಡು ಬಂದಿದೆ. ಅನುಮಾನಗೊಂಡ ಸಿಬ್ಬಂದಿ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚೀಲದಲ್ಲಿ ಏನಿದೆ ಎಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಿರಚ್ಛೇದಿತ ದೇಹ ಹಾಗೂ ಇತರೆ ಭಾಗಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿಟ್ಟಿರುವುದು ಕಂಡುಬಂದಿದೆ.

Jaya Refrigeration and Air Condition

ಅಪರಿಚಿತ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಚೆಕ್ ಮಾಡುತ್ತಿದ್ದಾರೆ. ಪ್ರಯಾಣಿಕರ ಚಲನವಲನಗಳನ್ನು ಮತ್ತು ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಕಾಣೆಯಾದ ವ್ಯಕ್ತಿಗಳ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.