ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಪುತ್ತೂರಿನಾದ್ಯಂತ ಗುಡುಗು ಸಹಿತ ಭಾರೀ ಮಳೆ-ಗಾಳಿ ಬೀಸಿದೆ.

ಏಕಾಏಕಿ ಸುರಿದ ಮಳೆಯಿಂದಾಗಿ ವಾಹನ ಸವಾರರು ಮತ್ತು ಜನ ಕೊಂಚ ಗಲಿಬಿಲಿಗೊಂಡಿದ್ದು, ಮಳೆಯಲ್ಲೇ ತಮ್ಮ ಮನೆ, ಉದ್ಯೋಗದ ಸ್ಥಳವನ್ನು ಸೇರುವಂತಾಗಿದೆ.


ಒಮ್ಮೆಲೇ ಸುರಿದ ಮಳೆಯಿಂದಾಗಿ ಬಿಸಿಲಿಗಾಗಿ ಹಾಕಿದ ಅಡಿಕೆಯೂ ಕೆಲವು ಕಡೆಗಳಲ್ಲಿ ಮಳೆ ನೀರಿನಿಂದ ತೊಯ್ದು ಹೋಗಿದೆ. ಭಾರೀ ಗುಡುಗು, ಗಾಳಿಯಿಂದಾಗಿ ಪುತ್ತೂರು ನಗರದಲ್ಲಿ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿದೆ.