


ಮಡಿಕೇರಿ: ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಶನಿವಾರ ಸಂಜೆ ಮಡಿಕೇರಿ ತಾಲ್ಲೂಕಿನ ಬೆಟ್ಟತೂರು ಗ್ರಾಮದಲ್ಲಿ ನಡೆದಿದೆ.


ಮಡಿಕೇರಿ ತಾಲೂಕಿನ ಮದೆ ಗ್ರಾಮ ಪಂಚಾಯಿತಿಯ ಬೆಟ್ಟತೂರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ (17) ಮೃತ ದುರ್ದೈವಿ. ಮಡಿಕೇರಿಯ ಸಂತ ಮೈಕೆಲ್ ಶಾಲೆಯ ಪ್ರಥಮ PUC ಯಲ್ಲಿ ವ್ಯಾಸಂಗ ಮಾಡುತಿದ್ದ ಪೂಜಾ ನಿನ್ನೆ ಸಂಜೆ 5:30ಕ್ಕೆ ಕಾಲೇಜು ಮುಗಿಸಿ ಮತ್ತೆ ಬೆಟ್ಟತೂರಿಗೆ ಬಂದಿದ್ದಳು. ಬಸ್ಸಿನಿಂದಿಳಿದು ಮನೆಗೆ ಹೋಗುವಾ ಏಕಾಏಕಿ ಬಂದ ಕಾಡಾನೆ ದಾರಿಯಲ್ಲೇ ದಾಳಿ ನಡೆಸಿದೆ. ಇದರಿಂದ ಪೂಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಯುವತಿಯ ಶವವನ್ನ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

