178 ಕೋಟಿ ಅಬಕಾರಿ ಅಕ್ರಮ – ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರ ಸರ್ಕಾರಿ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಒಟ್ಟು 15 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ, ಗೋವಾ ಹಾಗೂ ಮಹಾರಾಷ್ಟ್ರದ…
ಕಬಕ ಪುತ್ತೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಆಗ್ರಹ: ಕೇಂದ್ರ ರೈಲ್ವೆ ಸಚಿವರಿಗೆ ಎಂಎಲ್ಸಿ ಕಿಶೋರ್ ಕುಮಾರ್ ಮನವಿ
ಪುತ್ತೂರು: ಪ್ರಸ್ತಾವಿತ ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಆಗ್ರಹಿಸಿ ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ…
ಪುತ್ತೂರು: ಶ್ರೀ ಶಾರದಾ ಭಜನಾ ಮಂದಿರದ 92ನೇ ವರ್ಷದ ಪುತ್ತೂರು ದಸರಾಗೆ ಚಾಲನೆ – ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು: ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ಆಯೋಜಿಸಲಾಗುತ್ತಿರುವ 92ನೇ ವರ್ಷದ ಪುತ್ತೂರು ದಸರಾದ ಆಮಂತ್ರಣ ಪತ್ರಿಕೆ ಇಂದು ಬೆಳಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು. ಅಕ್ಟೋಬರ್ 11ರಿಂದ…
ಪುತ್ತೂರು ದರ್ಬೆ ಗಲಾಟೆ ಪ್ರಕರಣ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಆರೋಪ – 10 ಮಂದಿಗೆ ನಿರೀಕ್ಷಣಾ ಜಾಮೀನು
ಪುತ್ತೂರು: ಕೆಲ ದಿನಗಳ ಹಿಂದೆ ದರ್ಬೆಯಲ್ಲಿ ನಡೆದ ಗಲಾಟೆ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿದ್ದ ಹತ್ತು ಮಂದಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ದರ್ಬೆಯ ಜೆರಾಕ್ಸ್ ಅಂಗಡಿಯೊಂದರಲ್ಲಿ ಲ್ಯಾಮಿನೇಶನ್ ಮಾಡಿಸಲು ನೀಡಿದ್ದ ದಾಖಲೆ ಪತ್ರವೊಂದಕ್ಕೆ ಹಾನಿಯಾಗಿರುವ ವಿಚಾರದಲ್ಲಿ ಗ್ರಾಹಕರು…
ನಿಮ್ಮೂರಿನ ರಸ್ತೆ ಸರಿ ಇಲ್ಲ, ಹೆಣ್ಣು ಕೊಡಲ್ಲ – ಮಲೆನಾಡಿನ ಯುವಕರಿಗೆ ಎದುರಾದ ಹೊಸ ಸಂಕಷ್ಟ
ಚಿಕ್ಕಮಗಳೂರು: ರೈತರಿಗೆ ಹೆಣ್ಣು ಕೊಡಲ್ಲ ಅನ್ನೋ ಕಾಲ ಹೋಗಿ, ನಿಮ್ಮೂರಿನ ರಸ್ತೆ (Road) ಸರಿ ಇಲ್ಲ, ಹೆಣ್ಣು ಕೊಡಲ್ಲ ಅನ್ನೋ ಕಾಲ ಮಲೆನಾಡಿಗೆ ಬಂದಿದೆ. ಕಳಸ (Kalasa) ತಾಲೂಕಿನ ಕಾಡಂಚಿನ ಕುಗ್ರಾಮಗಳಲ್ಲಿ ರಸ್ತೆಗಳೇ ಸರಿ ಇಲ್ಲ. ಎಡೆಯೂರು, ಮರಸಣಿಗೆ, ಮಾವಿನಕೆರೆ, ಕೆ.ಕೆಳಗೂರು…
ಹೃದಯಾಘಾತದಿಂದ ಹೂವಿನ ಮಾರುಕಟ್ಟೆ ಉದ್ಯೋಗಿ ಲವ ಕುಮಾರ್ ನಿಧನ
ಪುತ್ತೂರು: ಕಳೆದ ಕೆಲ ವರ್ಷಗಳಿಂದ ಪುತ್ತೂರಿನ ಹೂವಿನ ಮಾರುಕಟ್ಟೆಯಲ್ಲಿರುವ ಉಳ್ಳಾಲ್ತಿ ಫ್ಲವರ್ಸ್ನಲ್ಲಿ ಉದ್ಯೋಗಿಯಾಗಿದ್ದ ಕಲ್ಲಾರೆ ನಿವಾಸಿ ಲವ ಕುಮಾರ್ (43) ಅವರು ಸೆ.8ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಸೆ.8ರಂದು ಬೆಳಗ್ಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಕ್ಷಣ ಅವರನ್ನು ಪುತ್ತೂರಿನ…
ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಾಳಿ: 9 ಕೈದಿಗಳಿಂದ 10 ಮೊಬೈಲ್ ಫೋನ್ಗಳು ಪತ್ತೆ!
ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ನಿಷೇಧಿತ ಮೊಬೈಲ್ ಫೋನ್ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಜೈಲಿಗೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ದಿನಾಂಕ ಸೆಪ್ಟೆಂಬರ್ 8ರ ರಾತ್ರಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು…
ರಾಜ್ಯದ ದೇವಾಲಯಗಳ ಆಸ್ತಿ ವೆಬ್ಸೈಟ್ನಲ್ಲಿ ಪ್ರಕಟಿಸಿ: ಹೈಕೋರ್ಟ್ ಆದೇಶ
ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳ ಚರ-ಸ್ಥಿರಾಸ್ತಿಗಳು, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಪುರಾತನ ಬೆಲೆಬಾಳುವ ವಸ್ತುಗಳ ಸಮಗ್ರ ವಿವರಗಳನ್ನು ಡಿಜಿಟಲೀಕರಣಗೊಳಿಸಿ ಅಧಿಕೃತ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಕುರಿತು ವಿವರವಾದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಶಾಸಕ ಅಶೋಕ್ ಕುಮಾರ್ ರೈಗೆ ತುಳು ಒಕ್ಕೂಟ ನಿಯೋಗ ಮನವಿ
ಪುತ್ತೂರು: ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿ ಅಖಿಲ ಭಾರತ ತುಳು ಒಕ್ಕೂಟದ ನಿಯೋಗ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರನ್ನು…
ವಿಟ್ಲ: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮೂವರು ಆರೋಪಿಗಳ ಬಂಧನ
ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 2026ರ ಫೆಬ್ರವರಿಯಿಂದ ಆಗಸ್ಟ್ವರೆಗಿನ ಅವಧಿಯಲ್ಲಿ ಜವಾದ್, ಶಾಹಿದ್, ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್…
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹೊನ್ನಾವರದಲ್ಲಿ ಪ್ರತಿಭಟನೆ; ಒಂದು ಲಕ್ಷ ಆಕ್ಷೇಪ ಪತ್ರ ಸಲ್ಲಿಕೆಗೆ ಸಿದ್ಧತೆ
ಕಾರವಾರ: ಕಸ್ತೂರಿ ರಂಗನ್ ವರದಿ (Kasturirangan Committee Report) ಜಾರಿಗೆ ವಿರೋಧಿಸಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು…
ಬೆಳಾಲು: ಬಡ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಡೈನಾ ಪ್ರವೀಣ್ ವಿಜಯ್ ಪಾರಳರಿಂದ ಪ್ರೋತ್ಸಾಹ ಧನ ಸಹಾಯ
ಬೆಳಾಲು: ಮೈತ್ರಿ ಯುವಕ ಮಂಡಲದ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭ ಸೆಪ್ಟೆಂಬರ್ 6ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಡೈನಾ ಪ್ರವೀಣ್ ವಿಜಯ್…
ಮೊಗ್ರು :ಜೈ ಶ್ರೀರಾಮ ಸೇವಾ ಟ್ರಸ್ಟ್(ರಿ) ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ.
ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ ಮೊಗ್ರು. ಸೆ.6.…
ಕೌಟುಂಬಿಕ ಕಲಹ: ಪತ್ನಿಗೆ ಹಲ್ಲೆ ಆರೋಪ – ಪತಿ ವಿಷ ಸೇವಿಸಿ ಅಸ್ವಸ್ಥ
ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಕುದ್ಮಾರು ನಿವಾಸಿ 38 ವರ್ಷದ ಸುಚಿತ್ರಾ ಪಿ.ಜೆ. ನೀಡಿದ ದೂರಿನಂತೆ, ಸುಮಾರು ನಾಲ್ಕು ವರ್ಷಗಳ ಹಿಂದೆ ಇದೇ ಗ್ರಾಮದ ಚಿದಾನಂದ…
ಪುತ್ತೂರು: ಶ್ರೀ ಶಾರದಾ ಭಜನಾ ಮಂದಿರದ 92ನೇ ವರ್ಷದ ದಸರಾ ಉತ್ಸವ – ನಾಳೆ ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು: ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ಆಯೋಜಿಸಲಾಗುತ್ತಿರುವ 92ನೇ ವರ್ಷದ ಪುತ್ತೂರು ದಸರಾ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಾಳೆ ನಡೆಯಲಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಾಳೆ ಬೆಳಗ್ಗೆ 10…
ಕ್ಷೇತ್ರೀಯ ಮಟ್ಟದ ವಿದ್ಯಾಭಾರತಿ ವಾಲಿಬಾಲ್ನಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ
ಬಡಗನ್ನೂರು: ಕ್ಷೇತ್ರೀಯ ಮಟ್ಟದ ವಿದ್ಯಾಭಾರತಿ ವಾಲಿಬಾಲ್ ಪಂದ್ಯಾಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಹೈದರಾಬಾದ್ನ ವಿದ್ಯಾಭಾರತಿ ವಿಜ್ಞಾನ ಕೇಂದ್ರದಲ್ಲಿ ನಡೆದ 14ರ ವಯೋಮಾನದ ಕ್ಷೇತ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿಗಳಾದ…
ನರಸಿಂಹ ಶೆಟ್ಟಿ ಮಾಣಿಗೆ ಬಿಗ್ ರಿಲೀಫ್: ಗಡಿಪಾರು ಪ್ರಕ್ರಿಯೆ ಹಿಂಪಡೆದ ಅಧಿಕಾರಿಗಳು
ಬಂಟ್ವಾಳ: ಮಾಣಿ ಗ್ರಾಮದ ನರಸಿಂಹ ಶೆಟ್ಟಿ ಯಾನೆ ಮಾಣಿ ನರಸಿಂಹ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವ ಕುರಿತು ವಿಟ್ಲ ಪೊಲೀಸರು ಸಲ್ಲಿಸಿದ್ದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು…
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅವ್ಯವಹಾರ ಆರೋಪ: ಆಡಳಿತ ಮಂಡಳಿ ಅಮಾನತಿಗೆ ಸಂರಕ್ಷಣಾ ಸಮಿತಿ ಆಗ್ರಹ
ಪುತ್ತೂರು: ಐತಿಹಾಸಿಕ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವಿರುದ್ಧ ಹಣಕಾಸು ಹಾಗೂ ದೇವಸ್ಥಾನದ ಜಾಗಕ್ಕೆ ಸಂಬಂಧಿಸಿದಂತೆ ಗಂಭೀರ ಅವ್ಯವಹಾರದ ಆರೋಪ ಕೇಳಿಬಂದಿದೆ. ದೇವಸ್ಥಾನದ ಆಡಳಿತ ಮಂಡಳಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಬೃಹತ್ ಪ್ರಮಾಣದ ಹಣಕಾಸು ಅವ್ಯವಹಾರ…
ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಮೊಳಗಿದ ಗುಂಡಿನ ಸದ್ದು – ರೌಡಿಶೀಟರ್ ಹತ್ಯೆ ಆರೋಪಿಗೆ ಗುಂಡೇಟು
ಶಿವಮೊಗ್ಗ: ನಗರದಲ್ಲಿ (Shivamogga) ಬೆಳ್ಳಂಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ಭಾನುವಾರ (ಸೆ.6) ಸಂಜೆ ನಡೆದಿದ್ದ ರೌಡಿಶೀಟರ್ ಕಿರಣ್ ಅಲಿಯಾಸ್ ಕುಳ್ಳಿ ಕಿರಣ್ ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಕೊಲೆ ಆರೋಪಿ ಉಮೇಶ್ ನಾಯ್ಕ್ (27) ಕಾಲಿಗೆ ಪೊಲೀಸರು…
ಬೈ ಬೈ ಪಪ್ಪಾ ಎಂದು ಚೆನಾಬ್ ನದಿಗೆ ಜಿಗಿದ ಯುವತಿ – ವಿಡಿಯೋ ವೈರಲ್
ಶ್ರೀನಗರ: ಯುವತಿಯೊಬ್ಬಳು ತಂದೆಗೆ ʻಬೈ ಬೈ ಪಪ್ಪಾʼ ಎಂದು ಚೆನಾಬ್ ನದಿಗೆ (Chenab River) ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ದೋಡಾದ ಪ್ರೇಮ್ ನಗರದಲ್ಲಿ ನಡೆದಿದೆ. ಯುವತಿ ನದಿಗೆ ಜಿಗಿಯುತ್ತಿರುವ ವಿಡಿಯೋ ವ್ಯಕ್ತಿಯೊಬ್ಬರ…
ಗುರುವಾಯನಕೆರೆ: ಓವರ್ಟೇಕ್ ಭರದಲ್ಲಿ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್; ಮನೆಯ ಅಂಗಳಕ್ಕೆ ನುಗ್ಗಿದ ಬಸ್!
ಗುರುವಾಯನಕೆರೆ: ಪುತ್ತೂರಿನಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ವೊಂದು ಓವರ್ಟೇಕ್ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ಇಂದು (ಸೆ.07) ಗುರುವಾಯನಕೆರೆಯ ಕುಲಾಲ ಮಂದಿರದ ಬಳಿ ನಡೆದಿದೆ. ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡುವ ಭರದಲ್ಲಿ ಬಸ್…
ವಂದೇ ಭಾರತ್ಗೆ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ: ರೈಲ್ವೆ ಮಂಡಳಿಗೆ ಡಾ. ಅರುಣಾ ಶ್ಯಾಮ್ ಮನವಿ
ಪುತ್ತೂರು: ಬೆಂಗಳೂರು–ಮಂಗಳೂರು ನಡುವೆ ಸಂಚರಿಸಲಿರುವ 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಾಯೋಗಿಕ ಸಂಚಾರದ ವೇಳೆ ಹಾಗೂ ಬಳಿಕ ವಾಣಿಜ್ಯ ಸಂಚಾರ ಆರಂಭವಾದಾಗ ನಿಯಮಿತ ನಿಲುಗಡೆ ಕಲ್ಪಿಸುವಂತೆ ಹಿರಿಯ ವಕೀಲರಾದ ಡಾ. ಅರುಣಾ ಶ್ಯಾಮ್. ಎಂ. ಅವರು…
ಪುತ್ತೂರು: ಸಾಮೆತ್ತಡ್ಕ ನಿವಾಸಿ ಕೆ. ಚಿದಾನಂದ (57) ನಿಧನ
ಪುತ್ತೂರು: ಸಾಮೆತ್ತಡ್ಕ ನಿವಾಸಿ ಶ್ರೀಮತಿ ದೇವಕಿಯವರ ಪುತ್ರ ಕೆ. ಚಿದಾನಂದ (57) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.31ರಂದು ನಿಧನರಾದರು. ಮೃತರು ತಾಯಿ, ಪತ್ನಿ ಹಾಗೂ ಮಗಳು ಸೇರಿದಂತೆ ಸಹೋದರ ಮತ್ತು ಸಹೋದರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು,…
ವಿಟ್ಲ: ಹಿಂಜಾವೇ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿಗೆ ಗಡಿಪಾರು ನೋಟಿಸ್
ವಿಟ್ಲ: ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ಅವರಿಗೆ ಜಿಲ್ಲೆಯಿಂದ ಗಡಿಪಾರು ಮಾಡುವ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ. ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಲಕ್ಷಪ್ಪ…
‘ಬಳ್ಳಾರಿ ಚಲೋ’ 6ನೇ ದಿನಕ್ಕೆ – ಜನಸಾಗರದ ನಡುವೆ ಪಾದಯಾತ್ರೆ, ರಣೋತ್ಸಾಹದಲ್ಲಿ ಹೆಜ್ಜೆ ಹಾಕಿದ ಕಿಶೋರ್ ಕುಮಾರ್ ಪುತ್ತೂರು
ಜನವಿಶ್ವಾಸದ ‘ಬಳ್ಳಾರಿ ಚಲೋ’ ಜನಾಂದೋಲನ 6ನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆಗೆ ದಿನದಿಂದ ದಿನಕ್ಕೆ ಜನಬೆಂಬಲ ಹೆಚ್ಚಾಗುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಆರಂಭಗೊಂಡ ಪಾದಯಾತ್ರೆಯು ಮರಳಿ ಗ್ರಾಮದಿಂದ ಇಂದಿನ ಪ್ರತಿಭಟನೆಯ ನಡಿಗೆಯನ್ನು ಆರಂಭಿಸಿತು. ಹಾದಿಯುದ್ದಕ್ಕೂ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ವ್ಯಕ್ತವಾದ ಬೆಂಬಲದೊಂದಿಗೆ ಪಾದಯಾತ್ರೆ…
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಒಂದು ವಾರದ ತರಬೇತಿ ಶಿಬಿರ
ಪಟ್ಟೆ ಬಡಗನ್ನೂರು: 3A ಸೈಡ್ ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಆಯ್ಕೆ ಆಟಗಾರರಿಗೆ ಒಂದು ವಾರಗಳ ತರಬೇತಿ ಶಿಬಿರ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಿತು. ಮಹಾರಾಷ್ಟ್ರದ…
ತಾಯಿಯ ನಂತರ ಮಗುವಿನ ಬದುಕನ್ನು ಹೆಚ್ಚು ಪ್ರಭಾವಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ: ಡಾ. ಮಮತಾ ಕೆ : ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಶಿಕ್ಷಕ ವೃತ್ತಿಯು ಅತ್ಯಂತ ಅಮೂಲ್ಯವಾದುದು. ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಕಾಣದಂತೆ ನಿಂತಿರುವ ಶಕ್ತಿ ಶಿಕ್ಷಕರದು. ತಾಯಿಯ ನಂತರ ಮಗುವಿನ ಬದುಕನ್ನು ಹೆಚ್ಚು ಪ್ರಭಾವಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ.ಶಿಕ್ಷಕರು ಕೇವಲ ಪಾಠವನ್ನು ಬೋಧಿಸುವವರಲ್ಲ; ಅವರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ, ಮೌಲ್ಯಗಳು ಮತ್ತು…
ಉಜಿರೆ ಕಾಶಿಬೆಟ್ಟಿನಲ್ಲಿ ‘ಸ್ಕೈ ಗ್ರೂಪ್ಸ್ ಅಲ್ಯೂಮಿನಿಯಂ ಏಜೆನ್ಸಿ’ ಶುಭಾರಂಭ
ಉಜಿರೆ: ಉಜಿರೆ ಕಾಶಿಬೆಟ್ಟು ಬಳಿ ನೂತನವಾಗಿ ಆರಂಭಗೊಂಡಿರುವ ಸ್ಕೈ ಗ್ರೂಪ್ಸ್ ಅಲ್ಯೂಮಿನಿಯಂ ಏಜೆನ್ಸಿ ಸೆಪ್ಟೆಂಬರ್ 6ರಂದು ಶುಭಾರಂಭಗೊಂಡಿತು. ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರು ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ, ಉದ್ಯಮ ಯಶಸ್ವಿಯಾಗಿ…
ಬೆಳಾಲಿನಲ್ಲಿ 22ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಾರೋಪ: ಸಾಧಕರಿಗೆ ಗೌರವಾರ್ಪಣೆ
ಬೆಳಾಲು: ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೆಪ್ಟೆಂಬರ್ 6ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ…
ಕುತ್ಲೂರು ಭಾಗದ ವಿದ್ಯುದೀಕರಣಕ್ಕೆ ವನ್ಯಜೀವಿ ಮಂಡಳಿ ಅನುಮತಿ: ಶಾಸಕ ಹರೀಶ್ ಪೂಂಜರಿಗೆ ಗ್ರಾಮಸ್ಥರಿಂದ ಸನ್ಮಾನ
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಲಂಬ, ಪಂಜಾಲ್, ನಂಗಾಜೆ ಹಾಗೂ ಅಂಜರೊಟ್ಟು ಭಾಗಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಹುಕಾಲದ ಬೇಡಿಕೆಗೆ ಇದೀಗ ಮಹತ್ವದ ಸ್ಪಂದನೆ ದೊರೆತಿದೆ. ವಿದ್ಯುತ್ ಮಾರ್ಗ ಅಳವಡಿಸಲು ಅಗತ್ಯವಿದ್ದ ವನ್ಯಜೀವಿ ಮಂಡಳಿಯ ಅನುಮತಿ ದೊರೆತ…
ಬೆಂಗಳೂರು – ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಾಯೋಗಿಕ ಸಂಚಾರ ಆರಂಭ
ಬೆಂಗಳೂರು: ಯಶವಂತಪುರ(Yeshwantpur) ಮತ್ತು ಮಂಗಳೂರು ಸೆಂಟ್ರಲ್(Mangaluru Centrl) ನಡುವೆ ರೈಲಿನ ಚಾಲನಾ ಸಮಯ ಹಾಗೂ ಮಾರ್ಗದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್(Bengaluru-Mangaluru Vande Bharat Express) ಖಾಲಿ ರೇಕ್ನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಆರಂಭವಾಗಿದೆ. ಬೆಳಗ್ಗೆ ಯಶವಂತಪುರ…
ಪುತ್ತೂರುದ ಪಿಲಿಗೊಬ್ಬು 2026 ಸೀಸನ್–4ಕ್ಕೆ ಸಜ್ಜು: ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು: ಪುತ್ತೂರುದ ಪಿಲಿಗೊಬ್ಬು 2026 ಸೀಸನ್–4ರ ಆಮಂತ್ರಣ ಪತ್ರಿಕೆ ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ವಿಜಯ ಸಾಮ್ರಾಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ, ಸಹಜ್ ರೈ ಬಳಜ್ಜ ಅವರ ಮುಂದಾಳತ್ವದಲ್ಲಿ ಅಕ್ಟೋಬರ್ 17ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ…
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಭೇಟಿ
ಪುತ್ತೂರು: ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಅವರು ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಪುತ್ತೂರು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ…
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಆರೋಪ: ಪುತ್ತೂರಿನಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಮಹಿಳೆಯೊಬ್ಬರಿಗೆ ಪತಿ ಹಲ್ಲೆ ನಡೆಸಲು ಮುಂದಾದ ವೇಳೆ, ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 4ರಂದು ರಾತ್ರಿ ಪುತ್ತೂರು ಗ್ರಾಮಾಂತರ ಠಾಣೆಯ ಹೆಚ್ಸಿ ಮಧು ಹಾಗೂ…
ಮರ್ದಾಳದ ಕುಂಡಡ್ಕ ಫಾಲ್ಸ್ ಗೆ ಸಂಬಂಧಿಸಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ; ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ವಾದ
ಕಡಬ ಬಂಟ್ರ ಗ್ರಾಮದ ಮರ್ದಾಳ ಕುಂಡಡ್ಕ ಫಾಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು, ಅದರಲ್ಲೂ ದಲಿತ…
ಪುರುಷರಕಟ್ಟೆ ಪ್ರಕರಣ: ನ್ಯೂಸ್ ಫೋಕಸ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ | ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ
ಪುತ್ತೂರು: ಪುರುಷರಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ನ್ಯೂಸ್ ಫೋಕಸ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಇದೀಗ ಹೈಕೋರ್ಟ್ ತಡೆ ನೀಡಿದೆ. ನ್ಯೂಸ್ ಫೋಕಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್…
ತಮಿಳುನಾಡಿಗೆ ಕಾವೇರಿ ನೀರು – ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತ
ಮಂಡ್ಯ: ಕೆಆರ್ಎಸ್ ಜಲಾಶಯದಿಂದ(KRS Dam) ತಮಿಳುನಾಡಿಗೆ(Tamil Nadu) ಕಾವೇರಿ ನೀರು ಹರಿಸುತ್ತಿರುವುದು ಇದೀಗ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ರಂಗನತಿಟ್ಟು ಪಕ್ಷಿಧಾಮದ(Ranganathittu Bird Sanctuary) ಮೇಲೂ ತೀವ್ರ ಪರಿಣಾಮ ಬೀರಿದೆ. ಸುರಕ್ಷತಾ ದೃಷ್ಟಿಯಿಂದ ಪಕ್ಷಿಧಾಮದಲ್ಲಿ ಕಳೆದ 10 ದಿನಗಳಿಂದ ದೋಣಿ ವಿಹಾರ(Boating)…
ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ
ತಿರುವನಂತಪುರಂ:ನಿಲ್ಲಿಸಿದ್ದ ಗೂಡ್ಸ್ ಲಾರಿಯ ಹಿಂಭಾಗಕ್ಕೆ ಕಾರು(Car) ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕೇರಳದ(Kerala) ತ್ರಿಶ್ಯೂರು ಜಿಲ್ಲೆಯಲ್ಲಿ ನಡೆದಿದೆ. ಮೃತರ ಪೈಕಿ ಐವರನ್ನು ತಮಿಳುನಾಡಿನ ಸೇಲಂ ಮೂಲದ ವಿಶ್ವ (20), ದಿಂಡಿಗಲ್ ಮೂಲದ ಸೂರ್ಯ (20),…
ನೇಪಾಳಕ್ಕೆ ಮತ್ತೆ ವಿನಾಶಕಾರಿ ಪ್ರವಾಹದ ಎಚ್ಚರಿಕೆ – ʻಮಹಾಕಾಳಿʼ ಸೇರುವ ಚೌಲಾನಿ ನದಿಗೆ ಭೂಕುಸಿತ
ಕಠ್ಮಂಡು: ವಿನಾಶಕಾರಿ ಪ್ರವಾಹದಲ್ಲಿ (Nepal Flood) ಸಾವಿರಾರು ಜನರನ್ನ ಕಳೆದುಕೊಂಡಿರುವ ನೇಪಾಳಕ್ಕೆ ಈಗ ಮತ್ತೊಂದು ಪ್ರವಾಹದ ಮುನ್ಸೂಚನೆ ಬಂದಿದೆ. ದಾರ್ಚುಲಾ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಚೌಲಾನಿ ನದಿಯ (Chaulani River) ಹರಿವಿಗೆ ಭಾಗಶಃ ಅಡ್ಡಿಯಾಗಿದೆ. ಇದರಿಂದ ನದಿಯ ಕೆಳಭಾಗದಲ್ಲಿ ವಾಸಿಸುವ…
ಪಾಣಾಜೆ: ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆ – ಕತ್ತು ಕೊಯ್ದು ಆತ್ಮಹತ್ಯೆ ಶಂಕೆ
ಪಾಣಾಜೆ: ಕೆರೆಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಕಲ್ಲಪದವು ಎಂಬಲ್ಲಿ ನಡೆದಿದೆ. ಮೃತರನ್ನು ಕಲ್ಲಪದವು ನಿವಾಸಿ ಗಣೇಶ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಕತ್ತು ಕೊಯ್ದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.…
ತೆಕ್ಕಾರು ಟೈಗರ್ಸ್ನ 5ನೇ ವರ್ಷದ ಹುಲಿ ವೇಷ: ಆಮಂತ್ರಣ ಪತ್ರಿಕೆ ಬಿಡುಗಡೆ
ತೆಕ್ಕಾರು: ಫ್ರೆಂಡ್ಸ್ ತೆಕ್ಕಾರು ಇದರ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಲಾಗಿರುವ 5ನೇ ವರ್ಷದ ತೆಕ್ಕಾರು ಟೈಗರ್ಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಕ್ಟೋಬರ್ 11ರಂದು ಸಂಜೆ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಜಂಡೆ ಮೆರವಣಿಗೆ ಹೊರಡಲಿದ್ದು, ರಾತ್ರಿ 8…
ರಾಜ್ಯದಲ್ಲಿ ಮತ್ತಷ್ಟು ತಗ್ಗಲಿದೆ ಮಳೆ – ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆ
ಬೆಂಗಳೂರು: ನಿರೀಕ್ಷೆಯಂತೆ ಅಬ್ಬರಿಸದ ಮುಂಗಾರಿನ ನಡುವೆ, ರಾಜ್ಯದಲ್ಲಿ(Karnataka) ಮಳೆ ಮತ್ತಷ್ಟು ಕ್ಷೀಣಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ದಕ್ಷಿಣ ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.…
ಕೊಕ್ಕಡ ವಲಯ ಮಟ್ಟದ ಕಬಡ್ಡಿಯಲ್ಲಿ ಬೆಳಾಲು ಎಸ್ಡಿಎಂ ಪ್ರೌಢಶಾಲೆಗೆ ಪ್ರಥಮ ಸ್ಥಾನ: ತಾಲೂಕು ಮಟ್ಟಕ್ಕೆ ಆಯ್ಕೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಸೆಪ್ಟೆಂಬರ್ 1ರಂದು ನಡೆದ ಕೊಕ್ಕಡ ವಲಯ ಮಟ್ಟದ 17ರ ವಯೋಮಾನದ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಬೆಳಾಲು ಎಸ್ಡಿಎಂ ಪ್ರೌಢಶಾಲೆಯ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಬೆಳಾಲು ಎಸ್ಡಿಎಂ ಪ್ರೌಢಶಾಲಾ…
ಪುತ್ತೂರು: ದೇವಸ್ಥಾನಗಳ ಕಾಣಿಕೆ ಡಬ್ಬಿ ಕಳ್ಳತನ ಪ್ರಕರಣ — ಅಂತರ್ರಾಜ್ಯ ಕಳ್ಳನ ಬಂಧನ, ₹1 ಲಕ್ಷ ಮೌಲ್ಯದ ಸೊತ್ತು ವಶ!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದೇವಸ್ಥಾನಗಳ ಕಾಣಿಕೆ ಡಬ್ಬಿ ಕಳ್ಳತನ ಹಾಗೂ ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಂತರ್ರಾಜ್ಯ ಕಳ್ಳನನ್ನು ಬಂಧಿಸಿ, ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.…
ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್ನಿಂದ ಡೀಸೆಲ್ ಕಳವು: ಇಬ್ಬರು ಆರೋಪಿಗಳ ಬಂಧನ
ಪುತ್ತೂರು: ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್ನಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 3ರಂದು ರಾತ್ರಿ ಕಡಬ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಮಂಗಳೂರು–ಬೆಂಗಳೂರು ಹೆದ್ದಾರಿ…
ವಿಶೇಷ ಚೇತನ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು
ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ರವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮ ಬೌದ್ಧಿಕ ದಿವ್ಯಾಂಗರ ವಸತಿಯುತ ಕೇಂದ್ರದಲ್ಲಿ ಮಕ್ಕಳೊಂದಿಗೆ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಆಶ್ರಮದಲ್ಲಿದ್ದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ,…
ಕರಾವಳಿ ಪ್ರವಾಸೋದ್ಯಮ ಚಿನ್ನದ ಮೊಟ್ಟೆ ! ಪ್ರಕೃತಿದತ್ತ ಸೊಬಗಿನ ನಾಡಿಗೆ ಬೇಕಿದೆ ಹೂಡಿಕೆ : ಸಚಿವ ಸಂಪುಟದಲ್ಲಿ ಬಹುನಿರೀಕ್ಷೆ
ಮಂಗಳೂರು: ಪೂರ್ವದುದ್ದಕ್ಕೂ ಹಾಸಿರುವ ಹಚ್ಚ ಹಸಿರಿನ ಪಶ್ಚಿಮಘಟ್ಟ, ಪಶ್ಚಿಮಕ್ಕೆ ವಿಶಾಲವಾಗಿ ವ್ಯಾಪ್ತಿಸುವ ಕಡಲತೀರ. ಈ ಮಧ್ಯೆ ಪ್ರಾಕೃತಿಕ ಸೊಬಗಿನ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಕಂಡರೆ ಮುಂದೊಂದು ದಿನ ರಾಜ್ಯದ ಆದಾಯಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಬಹದು..! ನೆರೆಯ…
ಬ್ಲಿಂಕಿಟ್ನಲ್ಲಿ ಆರ್ಡರ್ ಮಾಡಿದ್ದ ಮೊಟ್ಟೆಯಲ್ಲಿ ಹುಳು: ದೂರು ನೀಡಿದ ಬೆನ್ನಲ್ಲೇ ದಾಳಿ ಮಾಡಿದ ಆರೋಗ್ಯ ಇಲಾಖೆ
ಬೆಂಗಳೂರು, ಸೆಪ್ಟೆಂಬರ್ 03: ಕ್ಷಿಪ್ರ ಡೆಲಿವರಿ ಆ್ಯಪ್ಗಳ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳುವ ಆಹಾರ ಪದಾರ್ಥಗಳ ಗುಣಮಟ್ಟದ ಮೇಲೆ ಮತ್ತೊಮ್ಮೆ ಗಂಭೀರ ಅನುಮಾನ ವ್ಯಕ್ತವಾಗಿದೆ. ಕರಾವಳಿ ನಗರಿ ಮಂಗಳೂರಿನಲ್ಲಿ ಆನ್ಲೈನ್ ಡೆಲಿವರಿ ‘ಬ್ಲಿಂಕಿಟ್‘ ಮೂಲಕ ಆರ್ಡರ್ ಮಾಡಿದ್ದ ಮೊಟ್ಟೆಯೊಂದರಲ್ಲಿ ಹುಳುಗಳು ಪತ್ತೆಯಾಗಿದ್ದು, ಗ್ರಾಹಕರು…
ಆ ಮರವನ್ನು ಯಾವ ಕಾರಣಕ್ಕೂ ಮುಟ್ಟಬೇಡಿ, ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತೆ!”: NHAI ಅಧಿಕಾರಿಗಳಿಗೆ ರಾಹುಗುಳಿಗ ದೈವದಿಂದ ಎಚ್ಚರಿಕೆ
ಮಂಗಳೂರು, ಸೆ.4: ದಕ್ಷಿಣ ಕನ್ನಡದಲ್ಲಿ ದೈವರಾಧನೆಗೆ ಹೆಚ್ಚಿನ ಮಹತ್ವ ಇದೆ. ಇಲ್ಲಿ ದೈವ ನುಡಿಯುವ ಪ್ರತಿ ಮಾತು ಅಚ್ಚರಿ ಎಂಬಂತೆ ನಿಜವಾಗಿರುವ ಹಲವು ಸಾಕ್ಷಿಗಳು ಇದೆ. ತುಳುನಾಡಿನಲ್ಲಿ ದೈವ ಹಾಗೂ ನಾಗನಿಗೆ ಹೆಚ್ಚಿನ ಮಹತ್ವ ಇದೆ. ಈ ಕಾರಣಕ್ಕೆ ತುಳುನಾಡು ಎಂದು…
ನಾಡಿನಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ
ಬೆಂಗಳೂರು: ನಾಡಿನಲ್ಲೆಡೆ ಇಂದು ಬೃಂದಾವನದ ನಂದನ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ. (Krishna Janmashtami) ಬೆಂಗಳೂರಿನ ವೇಣು ಮಾದವನ ದೇವಾಲಯಗಳಲ್ಲಿ ಶ್ರೀಕೃಷ್ಣಾಷ್ಟಮಿಯ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಇದರೊಂದಿಗೆ ರಾಜ್ಯದ ವಿವಿಧ ಶ್ರೀಕೃಷ್ಣನ ಸನ್ನಿಧಿಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಾಲಯದಲ್ಲೂ…
ಬೆಂಗಳೂರು-ಮಂಗಳೂರು ಮಧ್ಯೆ ಸೆ.5ಕ್ಕೆ ವಂದೇ ಭಾರತ್ ಪ್ರಾಯೋಗಿಕ ಸಂಚಾರ
ಬೆಂಗಳೂರು: ಯಶವಂತಪುರ(Yesvantpur) ಮತ್ತು ಮಂಗಳೂರು ಸೆಂಟ್ರಲ್(Mangaluru Centrl) ನಡುವೆ ರೈಲಿನ ಚಾಲನಾ ಸಮಯ ಹಾಗೂ ಮಾರ್ಗದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಭಾರತೀಯ ರೈಲ್ವೆಯು 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್(Bengaluru-Mangaluru Vande Bharat Express) ಖಾಲಿ ರೇಕ್ನ ಪ್ರಾಯೋಗಿಕ ಸಂಚಾರ ಶನಿವಾರ(ಸೆ.5) ನಡೆಯಲಿದೆ.…
2012ರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮೂಡಬಿದ್ರೆ ಠಾಣೆಯಲ್ಲಿ 2012ರಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ, ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 2009ರ ಮೇ ತಿಂಗಳಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯಿಂದ ಟೆಲ್ಕಾನ್ ಇಎಕ್ಸ್-70 ಮೆಷಿನ್ ವಾಹನ ಖರೀದಿಸಲು ಶ್ರೀನಿವಾಸ ಬಿ.ಆರ್. ಎಂಬವರು 10…
ಹಿಂಜಾವೇ ಮುಖಂಡ ದಿನೇಶ್ ಪಂಜಿಗಗೆ ಜಾಮೀನು ಮಂಜೂರು
ಪುತ್ತೂರು ದರ್ಬೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಸಂದೇಶ ಪ್ರಸಾರ ಮಾಡಿ ಬಂದ್ಗೆ ಕರೆ ನೀಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ದಿನೇಶ್ ಪಂಜಿಗ ಅವರಿಗೆ ಇದೀಗ…
ಶಾಲಾ ಮಕ್ಕಳ ಸುರಕ್ಷತೆ: ಶಾಲಾ ಬಸ್ ಚಾಲಕರು, ನಿರ್ವಾಹಕರು, ಆಡಳಿತ ಮಂಡಳಿಗೆ ಜಾಗೃತಿ ಕಾರ್ಯಕ್ರಮ
ಮಂಗಳೂರು: ನಗರ ಸಂಚಾರ ಪೊಲೀಸ್ ವತಿಯಿಂದ ಶಾಲಾ ಮಕ್ಕಳ ಬಸ್ ಸುರಕ್ಷತೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಬುಧವಾರ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಸದರಿ ಕಾರ್ಯಕ್ರಮದಲ್ಲಿ ಮಂಗಳೂರು ನಗರದ ವಿವಿಧ ಶಾಲೆಗಳ ಶಾಲಾ ಬಸ್ ಚಾಲಕರು, ಮಾಲಿಕರು, ಬಸ್ ಮ್ಯಾನೇಜರ್ಗಳು ಹಾಗೂ…
ಪುತ್ತೂರು ಪ್ರೆಸ್ ಕ್ಲಬ್ ಬಳಿ ಗಲಾಟೆ: ಅಬ್ದುಲ್ ಹಕೀಂಗೆ ಹಲ್ಲೆ, ಜೀವಬೆದರಿಕೆ ಆರೋಪ — ಪ್ರಕರಣ ದಾಖಲು
ಪುತ್ತೂರು: ಪತ್ರಿಕಾ ಗೋಷ್ಠಿಗೆ ಆಗಮಿಸಿದ್ದ ರಾಜಕೀಯ ಪಕ್ಷದ ಕಾರ್ಯಕರ್ತ ಅಬ್ದುಲ್ ಹಕೀಂ ಅವರನ್ನು ತಳ್ಳಾಡಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಒಡ್ಡಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 1ರಂದು ಮಧ್ಯಾಹ್ನ ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾ ಗೋಷ್ಠಿ…
ಪುತ್ತೂರು ಪ್ರೆಸ್ ಕ್ಲಬ್ ಎದುರು ಗಲಾಟೆ: ಪ್ರವೀಣ್ ಆಚಾರ್ಯ, ರವೂಫ್, ಹಕೀಂ ವಿರುದ್ಧ ಪ್ರಕರಣ
ಪುತ್ತೂರು: ಪುತ್ತೂರು ಪ್ರೆಸ್ ಕ್ಲಬ್ ಎದುರು ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಗಲಾಟೆ ನಡೆಸಿದ ಆರೋಪದಡಿ ಮೂವರು ಸೇರಿದಂತೆ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 1ರಂದು ಮಧ್ಯಾಹ್ನ ಪುತ್ತೂರು ಕಸಬ ಗ್ರಾಮದ ಪ್ರೆಸ್ ಕ್ಲಬ್…
ಮಂತ್ರಾಲಯದಲ್ಲಿ ವೈಭವದಿಂದ ಜರುಗಿದ ಮಹಾರಥೋತ್ಸವ – ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ
ರಾಯಚೂರು: ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿಗಳ (Guru Raghavendra Swamy) 355ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಕಲಿಯುಗ ಕಾಮಧೇನು ಗುರುರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉತ್ತರಾರಾಧನೆ ಹಿನ್ನೆಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ…
ಕೊಲೆಯತ್ನ ಪ್ರಕರಣದಲ್ಲಿ ಸುದರ್ಶನ್ ಪೈಗೆ ಬೇಲ್; ಅಂಗಡಿ ಮಾಲಕಿ ಅಂಜನಾ ಪೈಗೆ ನಿರೀಕ್ಷಣಾ ಜಾಮೀನು
ಪುತ್ತೂರು: ದರ್ಬೆಯ ಜನಸೇವಾ ಕೇಂದ್ರದಲ್ಲಿ ದಾಖಲಾತಿಯೊಂದಕ್ಕೆ ತಾಂತ್ರಿಕ ದೋಷದಿಂದ ಹಾನಿಯಾದ ವಿಚಾರಕ್ಕೆ ಸಂಬಂಧಿಸಿ ನಡೆದ ಅಹಿತಕರ ಘಟನೆ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಘಟನೆಗೆ ಸಂಬಂಧಿಸಿ ಕೊಲೆಯತ್ನ ಆರೋಪದಡಿ ಪ್ರಕರಣ ದಾಖಲಾಗಿ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ…
ಮತಕ್ಕಾಗಿ ಬಗೆಬಗೆಯ ನಾಟಕ – ರಾಯರೆಡ್ಡಿ ವಜಾಕ್ಕೆ ಭರತ್ ಶೆಟ್ಟಿ ಆಗ್ರಹ
ಮಂಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಮತ್ತು ಮಠ-ಮಂದಿರಗಳಿಗೆ ಹೋಗಬಾರದು ಎಂಬ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಅವರ ಹೇಳಿಕೆಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ(Bharat Shetty) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ತಕ್ಷಣವೇ…
ದರ್ಬೆ ಗಲಾಟೆ ಹಿನ್ನೆಲೆ: ಆದರ್ಶ ಆಸ್ಪತ್ರೆಗೆ ಭೇಟಿ ನೀಡಿ ಅಂಜನಾ ಪೈ ಆರೋಗ್ಯ ವಿಚಾರಿಸಿದ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ
ಪುತ್ತೂರು: ದರ್ಬೆ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಇಂದು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯಲ್ಲಿ ಗಾಯಗೊಂಡಿರುವ ಶ್ರೀಮತಿ ಅಂಜನಾ ಪೈ ಅವರ ಆರೋಗ್ಯವನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಪುತ್ತೂರು…
ಪುತ್ತೂರು ಚಲೋಗೆ ಬಿಜೆಪಿ ಭರ್ಜರಿ ಸಿದ್ಧತೆ..! ಆಗಸ್ಟ್ 31ರಂದು ದರ್ಬೆಯಿಂದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಬೃಹತ್ ಪ್ರತಿಭಟನೆ
ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಪುತ್ತೂರಿನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ನಡೆಯಲಿರುವ “ಪುತ್ತೂರು ಚಲೋ” ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ. ಕಾರ್ಯಕ್ರಮದ ಪೂರ್ವಭಾವಿ ಸಭೆಯು ಪುತ್ತೂರು ಬಿಜೆಪಿ ಕಚೇರಿಯಲ್ಲಿ…
ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸರ್ಕಾರಿ ರಜೆ ಘೋಷಣೆಗೆ ಮನವಿ: ಸಿಎಂಗೆ ಶಾಸಕ ಅಶೋಕ್ ರೈ ಮನವಿ
ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ದಿನವನ್ನು ಸರ್ಕಾರಿ ರಜಾದಿನವಾಗಿ ಘೋಷಣೆ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಅಶೋಕ್ ರೈ, ದಕ್ಷಿಣ ಕನ್ನಡ, ಉಡುಪಿ…
ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ: ಶಾಸಕ ಹರೀಶ್ ಪೂಂಜಾ ಭೇಟಿ, ಪ್ರಸಾದ ಸ್ವೀಕಾರ
ಚಾರ್ಮಾಡಿ : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಮಾತೃ ಮಂಡಳಿ ವತಿಯಿಂದ ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ಭಕ್ತಿಭಾವದಿಂದ ನಡೆಯಿತು. ಪೂಜಾ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜಾ ಅವರು ಭೇಟಿ ನೀಡಿ ದೇವರ ದರ್ಶನ ಪಡೆದು…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟು ಆರೋಪಿ ಕೊನೆಗೂ ಪೊಲೀಸರ ಬಲೆಗೆ!
ವೇಣೂರು: ಸುಮಾರು 13 ವರ್ಷಗಳಿಂದ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟು ಆರೋಪಿಯನ್ನು ವೇಣೂರು ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವೇಣೂರು ಪೊಲೀಸ್ ಠಾಣೆಯ ಅಕ್ರ 16/2012, ಕಲಂ 395 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀನಿವಾಸ್ ಕೆ @ ಶಿನಪ್ಪ…
08 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..! ಎಲ್ಪಿಸಿ ವಾರೆಂಟ್ ಜಾರಿ ಬಳಿಕ ಪೊಲೀಸರ ಬಲೆಗೆ
ಮಂಗಳೂರು: ಸುಮಾರು 08 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್ಪಿಸಿ ವಾರೆಂಟ್ ಆರೋಪಿಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುವಾಚ್ (45) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 2006ನೇ…
ಮೈಸೂರು | ಅರಮನೆ ಪ್ರವೇಶದ ವೇಳೆ ಗಾಬರಿಗೊಂಡ ಶ್ರೀರಾಮ ಆನೆ – ಕೆಲಕಾಲ ಆತಂಕ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಹಿನ್ನೆಲೆಯಲ್ಲಿ ದಸರಾ ಗಜಪಡೆಗಳಿಗೆ ಅರಣ್ಯ ಭವನದಲ್ಲಿ ಇಂದು ಬೆಳಗ್ಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಒಟ್ಟು 9 ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗಜಪಡೆಗಳು ಮೈಸೂರು ಅರಮನೆಯತ್ತ ಹೆಜ್ಜೆ ಹಾಕಿದವು. ಅರಮನೆ ದ್ವಾರಕ್ಕೆ…
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ – ಸಿಎಂ ಅಂಗಳದಲ್ಲಿ ಚೆಂಡು
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸಚಿವ ಬಿ. ನಾಗೇಂದ್ರ (B Nagendra) ಅವರು ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಗುರುವಾರವೇ ನಾಗೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಲುಪಿಸಿದ್ದಾರೆ…
ಮಂಗಳೂರು ಸಚಿವಸಂಪುಟ ಸಭೆಯಲ್ಲಿ ತುಳು ಭಾಷೆಯನ್ನುರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಿ: ಮುಖ್ಯಮಂತ್ರಿಗೆ ಶಾಸಕ ಅಶೋಕ್ ರೈ ಮನವಿ
ಪುತ್ತೂರು: ಮಂಗಳೂರಿನಲ್ಲಿ ಮುಂದೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಎರಡನೇ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬುಧವಾರ…
ಬಿಳಿಯೂರಿನಲ್ಲಿ ಸೆ.13ರಂದು “ಕೆಸರ್ದ ಗೊಬ್ಬು-2026” : ಆಮಂತ್ರಣ ಪತ್ರಿಕೆ ಬಿಡುಗಡೆ
ಪೆರ್ನೆ ವಲಯದ ಬಿಳಿಯೂರಿನಲ್ಲಿ ಸೆಪ್ಟೆಂಬರ್ 13ರಂದು ನಡೆಯಲಿರುವ “ಕೆಸರ್ದ ಗೊಬ್ಬು-2026” ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಪೆರ್ನೆ ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕರುವೆಲು–ಬಿಳಿಯೂರು ಹಾಗೂ ಶ್ರೀ ವಿಷ್ಣು ಮಹಿಳಾ ಭಜನಾ ಮಂಡಳಿ…
ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ
ರಾಯಚೂರು: ಕಲಿಯುಗದ ಕಾಮಧೇನು ಗುರುರಾಘವೇಂದ್ರ ಸ್ವಾಮಿಗಳ (Guru Raghavendra Swamy) 355ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯದಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. ಮಠದ ಆವರಣದಲ್ಲಿ ಧ್ವಜಾರೋಹಣ ನಡೆಸುವ ಮೂಲಕ ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಅವರು ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಿದರು.…
ಧರ್ಮಸ್ಥಳ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ | ಪೋಕ್ಸೋ ಪ್ರಕರಣದ ಆರೋಪಿ ಬೆಂಗಳೂರಿನಲ್ಲಿ ಬಂಧನ
ಧರ್ಮಸ್ಥಳ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಘಟನೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್ (21) ಬಂಧಿತ ಆರೋಪಿ.…
ನೇಪಾಳ ಭೀಕರ ಪ್ರವಾಹ | 400ರ ಗಡಿಯತ್ತ ಸಾವಿನ ಸಂಖ್ಯೆ – 1500ಕ್ಕೂ ಹೆಚ್ಚು ಜನ ನಾಪತ್ತೆ
ಕಠ್ಮಂಡು: ಮೂವತ್ತು ವರ್ಷಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹಕ್ಕೆ ನೇಪಾಳ (Nepal) ತತ್ತರಿಸಿಹೋಗಿದೆ. ಈ ನೈಸರ್ಗಿಕ ವಿಕೋಪದಲ್ಲಿ ಸಾವಿನ ಸಂಖ್ಯೆ 392ಕ್ಕೆ ತಲುಪಿದ್ದು, 1500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಬುಧವಾರ (ಆ.6) ಸಂಭವಿಸಿದ ಈ ಜಲಪ್ರಳಯದಿಂದಾಗಿ ದೇಶಾದ್ಯಂತ ವ್ಯಾಪಕ ನಷ್ಟ ಉಂಟಾಗಿದೆ. ಚಿತ್ರಾನ್,…
ಮರದ ಬಾಕ್ಸ್ ಒಡೆದು ₹84,800 ಕಳವು: ಕಡಬದಲ್ಲಿ ಪ್ರಕರಣ ದಾಖಲು
ಕಡಬ: ಮನೆಯಲ್ಲಿ ಇರಿಸಲಾಗಿದ್ದ ಮರದ ಬಾಕ್ಸ್ ಒಡೆದು ₹84,800 ನಗದು ಕಳವು ಮಾಡಿರುವ ಘಟನೆ ಕಡಬ ಅಡ್ಡಗದ್ದೆಯಲ್ಲಿ ನಡೆದಿದೆ. ಕಡಬ ಗ್ರಾಮದ ನಿವಾಸಿ ತಮನ್ನಾ ಜಬೀನ್ (43) ಅವರು ತಮ್ಮ ಗಂಡ, ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ಅಡ್ಡಗದ್ದೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ.…
ದಿನೇಶ್ ಪಂಜಿಗ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ ಮಹತ್ವದ ಆದೇಶ
ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡನೆ ದರ್ಬೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ ಕದಡುವ ರೀತಿಯ ಸಂದೇಶ ಪ್ರಸಾರ ಮಾಡಿ ಬಂದ್ಗೆ ಕರೆ ನೀಡಿದ ಆರೋಪದಡಿ ದಿನೇಶ್ ಪಂಜಿಗ…
ಮಾನಸಸರೋವರ ಯಾತ್ರೆಗೆ ತೆರಳಿದ್ದ ನಾಲ್ವರು ಕನ್ನಡಿಗರು ನಾಪತ್ತೆ – ಕಲಬುರಗಿಯ ಇಬ್ಬರು ಸುರಕ್ಷಿತ
ಬೆಂಗಳೂರು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ದುರಂತದಲ್ಲಿ ಕನ್ನಡಿಗರೂ ಸಿಲುಕಿಕೊಂಡಿದ್ದು, ಮಾನಸಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ನಾಲ್ವರು ಎನ್ಆರ್ಐ ಕನ್ನಡಿಗರು ನಾಪತ್ತೆಯಾಗಿದ್ದಾರೆ. ಮೂಲತಃ ಬೆಂಗಳೂರಿನವರಾಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಾಲ್ವರು ಯಾತ್ರಿಕರು ಮಾನಸಸರೋವರ ಯಾತ್ರೆಗಾಗಿ ಅಮೆರಿಕಾದಿಂದ…
ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ನೂರು ಕಾವು ಎಂಬಲ್ಲಿ ಜೂನ್ 19ರಿಂದ 20ರ ಅವಧಿಯಲ್ಲಿ ನಡೆದ ಓಮ್ನಿ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅ.ಕ್ರ. 94/2026ರಂತೆ BNS ಸೆಕ್ಷನ್ 303(2) ಅಡಿ…
ಸೌಜನ್ಯಾ ಮನೆಗೆ ಆರ್ಎಸ್ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಭೇಟಿ
ಬೆಳ್ತಂಗಡಿ: 13 ವರ್ಷಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ ಅವರ ಧರ್ಮಸ್ಥಳ ಗ್ರಾಮದ ಪಾಂಗಳ ಮನೆಗೆ ಆರ್ಎಸ್ಎಸ್ನ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಆಗಸ್ಟ್ 26ರಂದು ಭೇಟಿ ನೀಡಿದರು. ಈ…
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯಲ್ಲಿ ತುಳು ಯಕ್ಷಗಾನ ‘ಮಾಯಕದ ಬಿನ್ನೆದಿ’ ಪ್ರದರ್ಶನ
ಪಟ್ಟೆ ಬಡಗನ್ನೂರು: ತುಳು ಭಾಷೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಬೇಕು ಹಾಗೂ ಯಕ್ಷಗಾನ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಹೇಳಿದರು. ಪಟ್ಟೆಯ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಸಭಾಭವನದಲ್ಲಿ ಆಗಸ್ಟ್ 22ರಂದು ತುಳು ವರ್ಲ್ಡ್ ಫೌಂಡೇಶನ್…
ತಂಗಿಯ ಕೊಲೆ ಪ್ರಕರಣ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ, ₹11 ಸಾವಿರ ದಂಡ
ಪುತ್ತೂರು: ಮೊಬೈಲ್ ವಿಚಾರಕ್ಕೆ ಸಂಬಂಧಿಸಿದಂತೆ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2019ರ ಅಕ್ಟೋಬರ್ 8ರಂದು ಕಂಬಳಪದವು ನಿವಾಸಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ ತನ್ನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಅವರೊಂದಿಗೆ ಮೊಬೈಲ್…
ರೈತ ವಿರೋಧಿ ಸರ್ಕಾರದ ವಿರುದ್ಧ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ: ಕಿಸಾನ್ ಸಮ್ಮಾನ್ ನಿಧಿ ಕಡಿತ, ಬೆಳೆ ವಿಮೆ ವಂಚನೆ ಆರೋಪ
ಬೆಂಗಳೂರು/ಪುತ್ತೂರು: ರಾಜ್ಯ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ನಿಧಿಯಲ್ಲಿ ರಾಜ್ಯದ 4 ಸಾವಿರ ರೂಪಾಯಿ…
ನೇಪಾಳದಲ್ಲಿ ರಣಭೀಕರ ಪ್ರವಾಹಕ್ಕೆ 8 ಬಲಿ – 32 ಪೊಲೀಸರು ಸೇರಿ ನೂರಾರು ಜನ ನಾಪತ್ತೆ
ಕಠ್ಮಂಡು: ನೇಪಾಳದಲ್ಲಿ ಉಂಟಾಗಿರುವ ರಣ ಭೀಕರ ಪ್ರವಾಹದಲ್ಲಿ (Nepal flood) ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. 41 ಭದ್ರತಾ ಸಿಬ್ಬಂದಿ ಸೇರಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಭೋಟೆ ಕೋಶಿ ನದಿಯಲ್ಲಿ (Bhote Koshi River) ಉಂಟಾದ ಹಠಾತ್…
ಪುತ್ತೂರು ದರ್ಬೆ ಬೈಪಾಸ್ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್; ಮನೆಯ ಕಾಂಪೌಂಡ್ಗೆ ಡಿಕ್ಕಿ
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಮನೆಯ ಕಾಂಪೌಂಡ್ಗೆ ಡಿಕ್ಕಿ ಹೊಡೆದು ನಿಂತ ಘಟನೆ ದರ್ಬೆ ಬೈಪಾಸ್ ಬಳಿಯ ಅಶ್ವಿನಿ ಸರ್ಕಲ್ ಬಳಿ ನಡೆದಿದೆ. ಬಸ್ಸಿನಲ್ಲಿ ಬ್ರೇಕ್ ವೈಫಲ್ಯ ಉಂಟಾದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.…
ʻಟಾಕ್ಸಿಕ್ʼ ಭರ್ಜರಿ ಓಪನಿಂಗ್ – ಇಂದಿನಿಂದ ʻರಾಯʼನ ಅಬ್ಬರ; ಮುಗಿಲುಮುಟ್ಟಿದ ಫ್ಯಾನ್ಸ್ ಸಂಭ್ರಮ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ಜಗತ್ತಿನಾದ್ಯಂತ ತೆರೆಕಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸುಮಾರು ನಾಲ್ಕುವರೆ ವರ್ಷಗಳ ಬಳಿಕ ಯಶ್ ಮತ್ತೆ ಬೆಳ್ಳಿತೆರೆಯ ಮೇಲೆ ನೋಡುತ್ತಿದ್ದು, ರಾಜ್ಯದಾದ್ಯಂತ ಚಿತ್ರಮಂದಿರಗಳ ಮುಂದೆ ಫ್ಯಾನ್ಸ್ ಅಬ್ಬರ ಜೋರಾಗಿದೆ. ದೇಶಾದ್ಯಂತ…
ನಿಷೇಧಿತ ಹಣಪರಿಚಲನೆ ಯೋಜನೆ ಆರೋಪ: ಕಡಬದಲ್ಲಿ 7 ಮಂದಿ ವಿರುದ್ಧ ಪ್ರಕರಣ
ಕಡಬ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ಭವನದಲ್ಲಿ KINGS Bazaar ಹೆಸರಿನಲ್ಲಿ ಅಕ್ರಮ ಹಣಪರಿಚಲನೆ ಯೋಜನೆ ನಡೆಸುತ್ತಿದ್ದ ಆರೋಪದ ಮೇಲೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕರಿಗೆ ಶೀಘ್ರವಾಗಿ ಹಣ ಗಳಿಸಬಹುದು, ಹೆಚ್ಚಿನ ಬೆಲೆಯ ವಸ್ತುಗಳನ್ನು ಕಡಿಮೆ ದರದಲ್ಲಿ ಪಡೆಯಬಹುದು ಹಾಗೂ ಯೋಜನೆಗೆ…
ಕಡಬ ಆಸಿಡ್ ದಾಳಿ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹3 ಲಕ್ಷ ದಂಡ
ಕಡಬದಲ್ಲಿ ನಡೆದ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಕಡಬ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಅಂದಿನ ತನಿಖಾಧಿಕಾರಿ ಹಾಗೂ ಪುತ್ತೂರು ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಕುಸುಮಾಧರ ಅವರು ಪ್ರಕರಣದ ಆರೋಪಿ…
ಪುತ್ತೂರು ಬಂದ್ಗೆ ಸಹಕರಿಸಿದ ವರ್ತಕರಿಗೆ ಉಜ್ವಲ್ ಪ್ರಭು ಧನ್ಯವಾದ
ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ಪುತ್ತೂರು ಬಂದ್ಗೆ ವ್ಯಾಪಾರಸ್ಥರು ಸಂಪೂರ್ಣ ಸಹಕಾರ ನೀಡಿದ್ದಾರೆ. ಹಿಂದೂ ಮಹಿಳೆಯ ಮೇಲೆ ನಡೆದ ಅಮಾನುಷ ಕೃತ್ಯ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿ…
ಬೆಳ್ತಂಗಡಿ: 60 ಲೀಟರ್ ಡೀಸೆಲ್ ಕಳವು – ಮಾಜಿ ಟೆಕ್ನಿಷಿಯನ್ ವಶಕ್ಕೆ
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಮೊಬೈಲ್ ಟವರ್ಗೆ ಸೇರಿದ ಸುಮಾರು 60 ಲೀಟರ್ ಡೀಸೆಲ್ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಂಡಸ್ ಮೊಬೈಲ್ ಟವರ್ ಸಂಸ್ಥೆಯ ಸೆಕ್ಯೂರಿಟಿ ಸೂಪರ್ವೈಸರ್ ದಿನೇಶ್…
ಪುತ್ತೂರು ಬಂದ್ಗೆ ಸಹಕರಿಸಿದವರಿಗೆ ಹಿಂದೂ ಜಾಗರಣ ವೇದಿಕೆಯಿಂದ ಧನ್ಯವಾದ
ಪುತ್ತೂರು ನಗರದ ದರ್ಬೆಯಲ್ಲಿ ನಡೆದ ಘಟನೆ ಹಾಗೂ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಕರೆ ನೀಡಲಾಗಿದ್ದ ಸ್ವಯಂಪ್ರೇರಿತ ಪುತ್ತೂರು ನಗರ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಂದ್ಗೆ ಸ್ಪಂದಿಸಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸಿದ ವರ್ತಕರು, ಆಟೋ…
ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ಯಶ್ – ‘ಟಾಕ್ಸಿಕ್’ ಯಶಸ್ಸಿಗಾಗಿ ವಿಶೇಷ ಪೂಜೆ
ʻಟಾಕ್ಸಿಕ್ʼ ಸಿನಿಮಾ ನಾಳೆ (ಆ.26) ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಈ ಬೆನ್ನಲ್ಲೇ ನಟ ಯಶ್ (Yash) ಅವರು ಇಂದು (ಆ.25) ಧರ್ಮಸ್ಥಳಕ್ಕೆ (Daramasthala) ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚೆನ್ನೈನಿಂದ ವಿಶೇಷ ವಿಮಾನದ…
ಪುತ್ತೂರು ಸ್ವಯಂ ಘೋಷಿತ ಬಂದ್ಗೆ ಸಹಕರಿಸಿದವರಿಗೆ ಬಿಜೆಪಿ ಧನ್ಯವಾದ
ಪುತ್ತೂರು: ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ಪುತ್ತೂರು ಸ್ವಯಂ ಘೋಷಿತ ಬಂದ್ಗೆ ಭಾರತೀಯ ಜನತಾ ಪಾರ್ಟಿ ಸಂಪೂರ್ಣ ಬೆಂಬಲ ನೀಡಿತ್ತು. ಬಿಜೆಪಿ ನೀಡಿದ ಕರೆಗೆ ಸ್ಪಂದಿಸಿ ಹಿಂದೂ ಸಮಾಜದವರು ಸ್ವಯಂಪ್ರೇರಿತವಾಗಿ ಬಂದ್ ನಡೆಸಿ, ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಹಲ್ಲೆಗೊಳಗಾದ ಮಹಿಳೆ…
ಪುತ್ತೂರು ಬಂದ್ಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಸುಳ್ಳು ಸುದ್ದಿ ಪ್ರಸಾರ: ಪ್ರಕರಣ ದಾಖಲು
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವಂತಹ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸಾಪ್ನಲ್ಲಿ ‘ಮಂಜುನಾಥ್’ ಎಂಬ ಹೆಸರಿನ ಖಾತೆಯಿಂದ ರಾಜಕೀಯ ಪಕ್ಷವೊಂದರ ಹೆಸರಿನಲ್ಲಿ, ಆಗಸ್ಟ್ 26ರಂದು…
ಪುತ್ತೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಪೊಲೀಸರ ದಂಡ
ಪುತ್ತೂರು ಸಂಚಾರ ಠಾಣಾ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ವಾಹನ ಚಾಲನೆಗೆ ಅಡ್ಡಿಯಾಗುವ ರೀತಿಯಲ್ಲಿ ಗ್ಲಾಸ್ಗಳಿಗೆ ಸ್ಟಿಕ್ಕರ್ ಅಳವಡಿಸಿರುವುದು ಹಾಗೂ ವಾಹನದ ನೋಂದಣಿ ಸಂಖ್ಯೆ ಕಾಣದಂತೆ ಸ್ಟಿಕ್ಕರ್ ಹಾಕಿಕೊಂಡು ಸಂಚರಿಸುತ್ತಿದ್ದ ವಾಹನಗಳನ್ನು ಪತ್ತೆಹಚ್ಚಿ ದಂಡ…
ಕಾರ್ಯಕ್ರಮದಿಂದ ಮನೆಗೆ ಬಿಡುವ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ದಾಖಲು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ದಿನಾಂಕ 23.08.2026ರಂದು ರಾತ್ರಿ ಕಾರ್ಯಕ್ರಮವೊಂದರಿಂದ ಬಾಲಕಿಯನ್ನು ಮನೆಗೆ ಬಿಡುವ ಸಲುವಾಗಿ ಆರೋಪಿತ ಅದ್ದು ಪಡೀಲ್ ಎಂಬಾತನು ತನ್ನ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ…
ಪುತ್ತೂರಿನಲ್ಲಿ ಪೊಲೀಸ್ ಪಥಸಂಚಲನ; ಅಂಗಡಿ ಬಂದ್ಗೆ ಬಲವಂತಕ್ಕೆ ಅವಕಾಶವಿಲ್ಲ
ಪುತ್ತೂರು: ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹಾಗೂ ಭದ್ರತೆಯ ಭಾವನೆ ಮೂಡಿಸುವ ಉದ್ದೇಶದಿಂದ ಆಗಸ್ಟ್ 24ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿಗಳು ಸ್ವಾಭಾವಿಕವಾಗಿ ಮುಚ್ಚಿರಲಿವೆ. ಆದರೆ ಇದರ ಹೊರತಾಗಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನು…
ಪುತ್ತೂರು ಬಂದ್ಗೆ ವ್ಯಾಪಾರಸ್ಥರ ಬೆಂಬಲಕ್ಕೆ ಉಜ್ವಲ್ ಪ್ರಭು ಮನವಿ
ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಖಂಡಿಸಿ, ಆಗಸ್ಟ್ 25ರಂದು ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಪುತ್ತೂರು ಬಂದ್ಗೆ ಎಲ್ಲಾ ವ್ಯಾಪಾರಸ್ಥರು ಬೆಂಬಲ ನೀಡುವಂತೆ ಪುತ್ತೂರು ತಾಲೂಕು ವ್ಯಾಪಾರ ಪ್ರಕೋಷ್ಠ ಸಂಚಾಲಕ ಉಜ್ವಲ್ ಕುಮಾರ್ ಪುತ್ತೂರು ಮನವಿ ಮಾಡಿದ್ದಾರೆ. ಸಂವಿಧಾನ…
6ನೇ ದಿನವೂ ನಾಗೇಂದ್ರ ರಾಜೀನಾಮೆಗಾಗಿ ಪರಿಷತ್ ಕಲಾಪ ಬಲಿ
ಬೆಂಗಳೂರು: ವಿಧಾನ ಪರಿಷತ್ 6ನೇ ದಿನ ಕಲಾಪವೂ ಸಚಿವ ನಾಗೇಂದ್ರ (Nagendra) ರಾಜೀನಾಮೆ ಒತ್ತಾಯಿಸಿ ಬಲಿಯಾಯ್ತು. ಸದನ ಪ್ರಾರಂಭ ಆದ ಕೂಡಲೇ ವಿಪಕ್ಷಗಳು ನಾಗೇಂದ್ರ ವಜಾ ಮಾಡುವಂತೆ ಘೋಷಣೆ ಕೂಗಿದರು. ಸಭಾಪತಿಗಳು ಮನವಿ ಮಾಡಿದ್ರು ಕ್ಯಾರೇ ಎನ್ನಲಿಲ್ಲ. ಈ ವೇಳೆ ಕಾಂಗ್ರೆಸ್…
ಪದ್ಮುಂಜ : “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾರಿಗೆ ಪದ್ಮುಂಜದಲ್ಲಿ ಗೌರವಾಭಿನಂದನೆ – 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಸನ್ಮಾನ !
ಪದ್ಮುಂಜ : ಬಂದಾರು, ಮೊಗ್ರು, ಕಣಿಯೂರು ಗ್ರಾಮದ ಅಭಿನಂದನಾ ಸಮಿತಿ ವತಿಯಿಂದ ಪ್ರತಿಷ್ಟಿತ ಕರ್ನಾಟಕ ಟಿವಿ ಕೊಡಮಾಡುವ ಕರಾವಳಿ ಹಾಗೂ ಮದ್ಯ ಕರ್ನಾಟಕ ವಿಭಾಗದಲ್ಲಿ “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾರವರಿಗೆ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಗೌರವಾಭಿನಂದನೆ-2026 ಕಾರ್ಯಕ್ರಮ…
ಪುತ್ತೂರು ದರ್ಬೆ ಗಲಾಟೆ: ಅಮಾನುಷ ದಾಳಿ ಖಂಡಿಸಿ ಆ.25ರಂದು ಸ್ವಯಂಪ್ರೇರಿತ ಬಂದ್ಗೆ ಬಿಜೆಪಿ ಬೆಂಬಲ
ಪುತ್ತೂರು ನಗರದ ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ಅಮಾನುಷ ದಾಳಿಯನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ, ಹಿಂದೂ ಜಾಗರಣ ವೇದಿಕೆ ವತಿಯಿಂದ ಆಗಸ್ಟ್ 25ರಂದು ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ. ಈ ಬಂದ್ಗೆ ಪುತ್ತೂರು ಭಾರತೀಯ ಜನತಾ ಪಾರ್ಟಿ…
ಪುತ್ತೂರು ಸ್ವಯಂಪ್ರೇರಿತ ಬಂದ್ಗೆ ವಿಶ್ವ ಹಿಂದೂ ಪರಿಷದ್ –ಬಜರಂಗದಳ ಸಂಪೂರ್ಣ ಬೆಂಬಲ ಘೋಷಣೆ
ಪುತ್ತೂರು ನಗರದ ದರ್ಬೆಯಲ್ಲಿ ನಡೆದ ಘಟನೆಯನ್ನು ಖಂಡಿಸಿ ಆಗಸ್ಟ್ 25ರಂದು ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಪುತ್ತೂರು ಸ್ವಯಂಪ್ರೇರಿತ ಬಂದ್ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಪೂರ್ಣ ಬೆಂಬಲ ಘೋಷಿಸಿದೆ. ಘಟನೆಯಲ್ಲಿ ಮಹಿಳೆಯ ಮೇಲೆ ನಡೆದ ಹಲ್ಲೆ, ಪೊಲೀಸ್…
ಪುತ್ತೂರು ದರ್ಬೆ ಗಲಾಟೆ: ಹಿಂದೂ ಜಾಗರಣ ವೇದಿಕೆಯಿಂದ ನಾಳೆ ಸ್ವಯಂಪ್ರೇರಿತ ಬಂದ್ಗೆ ಕರೆ
ಪುತ್ತೂರು ನಗರದ ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ಅಮಾನುಷ ದಾಳಿಯನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಆ.25ರಂದು ಪುತ್ತೂರು ಬಂದ್ಗೆ ಕರೆ ನೀಡಿದೆ. ಪುತ್ತೂರಿನಲ್ಲಿ ವರ್ತಕರ ಹಿತರಕ್ಷಣೆಗೆ ಒತ್ತು ನೀಡುವ ಜೊತೆಗೆ ನಗರದಲ್ಲಿ ಶಾಂತಿ,…
