



ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರ ಕನಸಿನ ಮಹತ್ವಾಕಾಂಕ್ಷಿ ಯೋಜನೆಯಾದ ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಗೆ ಸೂಕ್ತವಾದ ಲೋಗೋ ಹಾಗೂ ಟ್ಯಾಗ್‌ಲೈನ್ ರೂಪಿಸಲು ಸಾರ್ವಜನಿಕರಿಂದ ಸೃಜನಾತ್ಮಕ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.

ವೈದ್ಯಕೀಯ ಸೇವೆ, ಮಾನವೀಯತೆ, ಜ್ಞಾನ, ಸಂಶೋಧನೆ ಹಾಗೂ ಪುತ್ತೂರಿನ ಹೆಮ್ಮೆ ಪ್ರತಿಬಿಂಬಿಸುವ ರೀತಿಯಲ್ಲಿ ಆಸಕ್ತರು ತಮ್ಮ ಲೋಗೋ ಮತ್ತು ಟ್ಯಾಗ್‌ಲೈನ್‌ಗಳನ್ನು ವಿನ್ಯಾಸಗೊಳಿಸಿ ಸಲ್ಲಿಸಬಹುದು.


ವಿನ್ಯಾಸಗಳನ್ನು ಸಲ್ಲಿಸಲು ಜೂನ್ 20, 2026 ಕೊನೆಯ ದಿನಾಂಕವಾಗಿದ್ದು, ಮುದ್ರಿತ ರೂಪದಲ್ಲಿ ಶಾಸಕರ ಕಚೇರಿ, ಪುತ್ತೂರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದು ಸ್ಪರ್ಧೆಯಲ್ಲ ಎಂದು ಸ್ಪಷ್ಟಪಡಿಸಿರುವ ಆಯೋಜಕರು, ಪುತ್ತೂರಿನ ಭವಿಷ್ಯದ ಆರೋಗ್ಯ ಕ್ಷೇತ್ರದ ಮಹತ್ವದ ಯೋಜನೆಗೆ ಜನರ ಸೃಜನಾತ್ಮಕ ಕೊಡುಗೆಯನ್ನು ಆಹ್ವಾನಿಸುವ ಸಾರ್ವಜನಿಕ ಉಪಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಆಯ್ಕೆಯಾಗುವ ಲೋಗೋ ಮತ್ತು ಟ್ಯಾಗ್‌ಲೈನ್ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಆಸ್ಪತ್ರೆಯ ಶಾಶ್ವತ ಗುರುತಾಗಿ ಉಳಿಯಲಿದೆ.
“ಪುತ್ತೂರಿನ ಆರೋಗ್ಯ ಭವಿಷ್ಯಕ್ಕೆ ನಿಮ್ಮ ಸೃಜನಶೀಲತೆಯ ಸ್ಪರ್ಶ ನೀಡಿ ಹಾಗೂ ಬಹುಮಾನ ಗೆಲ್ಲಿ” ಎಂಬ ಸಂದೇಶದೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9972589370 ಸಂಖ್ಯೆಯನ್ನು ಸಂಪರ್ಕಿಸಬಹುದು.
