Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಳ್ಳಾರೆ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾ‌ರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಝಾಕೀರ್ ಸವಣೂರುಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

Out Look Fashion

ಪ್ರಕರಣದ 18ನೇ ಆರೋಪಿಯಾಗಿರುವ ಝಾಕೀರ್ ಸವಣೂರು (35), ಹತ್ಯೆಯ ಸಂಚಿನಲ್ಲಿ ನೇರವಾಗಿ ಭಾಗಿಯಾಗಿದ್ದ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾನೆ. ಪ್ರವೀಣ್‌ ನೆಟ್ಟಾರ್ ಹತ್ಯೆಯಾದ ಬೆನ್ನಲ್ಲೇ ಪೊಲೀಸರು ನಡೆಸಿದ ಆರಂಭಿಕ ಕಾರ್ಯಾಚರಣೆಯಲ್ಲಿ ಬಂಧಿತನಾದ ಮೊದಲ ಇಬ್ಬರು ಶಂಕಿತರಲ್ಲಿ ಈತನೂ ಒಬ್ಬ. 2022ರ ಜುಲೈ 28ರಂದು ಬೆಳ್ಳಾರೆಯ ಶಫೀಕ್ ಎಂಬಾತನೊಂದಿಗೆ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Jaya Refrigeration and Air Condition

ಹಿಂದಿನ ಜಾಮೀನು ಪ್ರಕರಣ:

ಈ ಹಿಂದೆ ಇದೇ ಪ್ರಕರಣದ 26ನೇ ಆರೋಪಿಯಾಗಿದ್ದ ಸೋಮವಾರಪೇಟೆಯ ಎಚ್.ವೈ. ರಿಯಾಜ್ ಎಂಬಾತನಿಗೂ ನ್ಯಾಯಾಲಯ ಜಾಮೀನು ನೀಡಿತ್ತು. ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ರಿಯಾಜ್‌ನನ್ನು ಬಂಧಿಸಲಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಯೊಬ್ಬನಿಗೆ ಬೇಲ್ ಸಿಕ್ಕಂತಾಗಿದೆ.