




ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಕಳಂಕ ತರಲು ತೆರೆಯ ಮರೆಯಲ್ಲಿ ನಡೆದಿದ್ದ ಮಹಾ ಸಂಚೊಂದು ಈಗ ಸಂಪೂರ್ಣವಾಗಿ ಬಟಾಬಯಲಾಗಿದೆ. ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ‘ಬುರುಡೆ ಕೇಸ್’ಗೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮತ್ತು ಎಕ್ಸ್‌ಕ್ಲೂಸಿವ್ ದಾಖಲೆಗಳು ಲಭ್ಯವಾಗಿದ್ದು, ಇಡೀ ಗ್ಯಾಂಗ್‌ನ ಅಂತರರಾಜ್ಯ ಮಟ್ಟದ ಹುನ್ನಾರ ಸಾರ್ವಜನಿಕವಾಗಿ ಅನಾವರಣಗೊಂಡಿದೆ.

ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬೃಹತ್ ಪ್ರಾಜೆಕ್ಟ್ ಸಿದ್ಧವಾಗಿತ್ತು ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.

ಈ ಮಹಾ ಸಂಚಿನ ಕೇಂದ್ರ ಬಿಂದುವಾಗಿರುವ ಪ್ರಕರಣದ ಆರೋಪಿ ಚಿನ್ನಯ್ಯ(Chinnaiah) ಹೈಕೋರ್ಟ್‌ಗೆ (High Court) ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಕ್ಷೇತ್ರಕ್ಕೆ ಕಳಂಕ ತರುವ ಈ ಕುತಂತ್ರದ ಹಿಂದೆ ಅಂತರರಾಜ್ಯ ಮಟ್ಟದ ದೊಡ್ಡ ಆರ್ಥಿಕ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಧರ್ಮಸ್ಥಳದ ವಿರುದ್ಧ ಹೋರಾಟ ನಡೆಸಲು ಕೇರಳದಿಂದ (Kerala) ಹಣದ ಹರಿವು ಹರಿದುಬಂದಿದ್ದು, ಈ ಕಾರ್ಯಾಚರಣೆ ಯಶಸ್ವಿಯಾದರೆ ಚಿನ್ನಯ್ಯನಿಗೆ 50 ಲಕ್ಷ ರೂ.ನೀಡುವುದಾಗಿ ಗ್ಯಾಂಗ್ ಆಮಿಷ ಒಡ್ಡಿತ್ತು ಎಂದು ಆರೋಪಿಸಿದ್ದಾನೆ.
